See also 1fifty
2fifty ಹಿಹ್ಟಿ
ನಾಮವಾಚಕ
  1. ಐವತ್ತು.
  2. ಐವತ್ತನ್ನು ಸೂಚಿಸುವ ಚಿಹ್ನೆ, ಸಂಕೇತ (50, l, L).
  3. (ಜನರ ವಿಷಯದಲ್ಲಿ) ಐವತ್ತರ ತಂಡ; (ವಸ್ತುಗಳ ವಿಷಯದಲ್ಲಿ) ಐವತ್ತರ ಕಟ್ಟು; ಐವತ್ತರ ಪಿಂಡಿ: he hid them by fifties in a cave ಅವನು ಅವುಗಳನ್ನು ಐವತ್ತು ಐವತ್ತರಂತೆ ಗವಿಯಲ್ಲಿ ಬಚ್ಚಿಟ್ಟನು.
ಪದಗುಚ್ಛ
  1. the fifties ಐವತ್ತರ ದಶಕ:
    1. ಜೀವನದ ಯಾ ಶತಮಾನದ 50 ರಿಂದ 60ರ ಹಂತದ ವರ್ಷಗಳು. a man in his fifties ಐವತ್ತರ ವರ್ಷಗಳಲ್ಲಿರುವ ಮನುಷ್ಯ: 50 ರಿಂದ 60 ವರ್ಷದ ಒಳಗಿರುವ ವಯಸ್ಸಿನ ವ್ಯಕ್ತಿ.
    2. (ವಯಸ್ಸು, ಕಾಲ, ಉಷ್ಣಾಂಶ, ಮೊದಲಾದವುಗಳ ಎಣಿಕೆಯಲ್ಲಿ) 50 ರಿಂದ 60ರೊಳಗಿನ ಶ್ರೇಣಿಯ ಭಾಗ: temperatures in the fifties 50-60ರ ಶ್ರೇಣಿಯೊಳಗಿನ ಉಷ್ಣಾಂಶಗಳು.
  2. fifty–one etc. ಐವತ್ತೊಂದು ಇತ್ಯಾದಿ.
  3. one-and-fifty etc. ಐವತ್ತೊಂದು ಇತ್ಯಾದಿ.
  4. fifty-first etc. ಐವತ್ತೊಂದನೆಯ ಇತ್ಯಾದಿ.