See also 2ferment
1ferment ಹರ್ಮೆಂಟ್‍
ನಾಮವಾಚಕ
  1. ಕಿಣ್ವ; ಹುದುಗು; ಹುದುಗುಕಾರಿ; ಸಾವಯವ ಪದಾರ್ಥ ಹುದುಗಲು ಅನುಕೂಲವಾಗುವಂತೆ ಅದಕ್ಕೆ ಬೆರೆಸುವ ಪದಾರ್ಥ.
  2. ಕಿಣ್ವನ; ಹುದುಗುವಿಕೆ; ಸಾವಯವ ಪದಾರ್ಥದ ಮಾಧ್ಯಮದಲ್ಲಿ ಸೂಕ್ಷ್ಮಜೀವಿಗಳು ಅಭಿವೃದ್ಧಿಯಾಗುವಾಗ ಅವುಗಳಲ್ಲಿರುವ ಎಂಜೈಮುಗಳ ಪರಿಣಾಮವಾಗಿ ರಾಸಾಯನಿಕ ಬದಲಾವಣೆಗಳಾಗುವುದು.
  3. (ಪ್ರಾಚೀನ ಪ್ರಯೋಗ) ಎಂಜೈಮು.
  4. ಗಲಭೆ; ಗಲಾಟೆ; ಕ್ಷೋಭೆ; ಪ್ರಕ್ಷುಬ್ಧತೆ; ಗದ್ದಲ; ಕೋಲಾಹಲ; ಅವಾಂತರ; ತುಮುಲ.
  5. ಕೆರಳಿಕೆ; ಉದ್ರೇಕ; ಅಶಾಂತಿ.
See also 1ferment
2ferment ಹರ್ಮೆಂಟ್‍
ಸಕರ್ಮಕ ಕ್ರಿಯಾಪದ
  1. ಕಿಣ್ವಿಸು; ಹುದುಗಿಸು; ಕಿಣ್ವನಕ್ಕೆ ಗುರಿಪಡಿಸು.
  2. ಅನಿಲದ ಗುಳ್ಳೆಗಳೇಳುವಂತೆ ಮಾಡು.
  3. ಕೆರಳಿಸು; ಉದ್ರೇಕಗೊಳಿಸು; ಅಶಾಂತಿ ಎಬ್ಬಿಸು.
  4. ಗಲಾಟೆ ಎಬ್ಬಿಸು; ಗಲಭೆ ಉಂಟುಮಾಡು; ಗದ್ದಲ ಉಂಟುಮಾಡು; ಕೋಲಾಹಲ ಎಬ್ಬಿಸು; ಅವಾಂತರ ಉಂಟುಮಾಡು.
ಅಕರ್ಮಕ ಕ್ರಿಯಾಪದ
  1. ಕಿಣ್ವಿಸು; ಕಿಣ್ವನಹೊಂದು; ಹುದುಗು.
  2. ಬುದ್ಬುದಿಸು; ಗುಳ್ಳೆಯೇಳು; ಗುಳ್ಳೆಗುಳ್ಳೆಯಾಗಿ ಹೊರಬರು.