See also 2fellow
1fellow ಹೆಲೋ
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) ಜೊತೆಗಾರ; ಸಂಗಾತಿ; ಸಂಗಡಿಗ; ಗೆಳೆಯ; ಕೂಡಾಡಿ; ಒಡನಾಡಿ; ಸಹಚರ: separated from his fellows ಸಂಗಡಿಗರಿಂದ ಬೇರ್ಪಟ್ಟು.
  2. ಜೊತೆಯದು; ಜೋಡಿಯಲ್ಲೊಂದು; ಜೋಡಿ; ಜೊತೆ; ಸಂವಾದಿ.
  3. ಸರಿಹೋಲುವುದು; ಸರಿಸಮವಾದದ್ದು.
  4. ಸಮಾನವರ್ಗಿ; ಸಜಾತೀಯ; ಅದೇ ತೆರದ್ದು; ಅದೇ ವರ್ಗದ್ದು.
  5. ಸಮಕಾಲೀನ; ಸಮಕಾಲಿಕ; ಒಂದೇ ಕಾಲದವನು ಯಾ ಕಾಲದ್ದು.
  6. (ಬ್ರಿಟಿಷ್‍ ವಿಶ್ವವಿದ್ಯಾನಿಲಯಗಳಲ್ಲಿ) ಹೆಲೋ; ಕಾಲೇಜು ಅಧ್ಯಾಪಕ ಮಂಡಲಿಯ ಜೊತೆಗೆ ಸೇರಿಸಿಕೊಂಡಿರುವ ಹಿರಿಯ ಸದಸ್ಯ.
  7. ಹೆಲೋ; ಶೋಧನೆ ನಡೆಸುವವ; ಷರತ್ತಿನ ಮೇಲೆ ಕೆಲವು ವರ್ಷಕಾಲ ವೇತನ ಪಡೆಯುವ ಚುನಾಯಿತ ಪದವೀಧರ.
  8. ಹೆಲೋ; ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಅಧಿಕಾರ ಮಂಡಲಿಯ ಸದಸ್ಯ.
  9. ಹೆಲೋ; ವಿವಿಧ ವಿದ್ವನ್ಮಂಡಲಿಗಳ ಸದಸ್ಯ.
  10. (ಆಡುಮಾತು) ಆಳು; ಮನುಷ್ಯ; ವ್ಯಕ್ತಿ; ಆಸಾಮಿ; ಇಸಮು.
  11. (ಅನೌಪಚಾರಿಕ) ನಲ್ಲ; ಇನಿಯ; ಪ್ರೇಮಿ: she had her fellow over to meet her folk ತನ್ನ ಸಂಬಂಧಿಗಳನ್ನು ಭೇಟಿಯಾಗಲೆಂದು ಅವಳು ತನ್ನ ಪ್ರೇಮಿಯನ್ನು ಬರಮಾಡಿಕೊಂಡಿದ್ದಳು.
  12. (ಹೀನಾರ್ಥಕ ಪ್ರಯೋಗ) ತುಚ್ಛ, ಹೀನ – ವ್ಯಕ್ತಿ.
ಪದಗುಚ್ಛ
  1. good fellow ಸರಸಮಿತ್ರ; ಸಲಿಗೆಯ ಗೆಳೆಯ.
  2. my dear (or good) fellow (ಸಂಬೋಧನೆ) ಅಪ್ಪಾ! ಅಣ್ಣಾ!
  3. old fellow ಹಳಬ; ಹಳೆಯವನು.
  4. poor fellow ಅಯ್ಯೋ ಪಾಪ! ಎಂಥ ದುರದೃಷ್ಟಶಾಲಿ!
  5. $^2$stout fellow.
  6. the fellow (ಹೀನಾರ್ಥಕ ಪ್ರಯೋಗ) ಅವ; ಅವನು.
ನುಡಿಗಟ್ಟು
  1. passed all his fellows ಅವನ ಜೊತೆಯವರನ್ನೆಲ್ಲ ಹಿಂದೆ ಹಾಕಿದ.
  2. shall never find his fellow ಅವನ ಸಮಾನರಿಲ್ಲ; ಅವನಂಥವನು ಇನ್ನಿಲ್ಲ.
  3. stone dead hath no fellow ಗುಟ್ಟು ಉಳಿಸಲು ಸತ್ತವನೇ ಸರಿ; ಗುಟ್ಟನ್ನು ಗುಟ್ಟಾಗಿಡುವುದು ಸತ್ತವನಿಗೆ ಮಾತ್ರ ಸಾಧ್ಯ.
See also 1fellow
2fellow ಹೆಲೋ
ಗುಣವಾಚಕ
  1. ಸಜಾತೀಯ ; ಸಮಾನವರ್ಗೀಯ; ಅದೇ ವರ್ಗಕ್ಕೆ ಸೇರಿದ: fellow creature ನಮ್ಮ ಜೊತೆಯವನು; ಅದೇ ದೇವರು ಸೃಷ್ಟಿಸಿದ ವ್ಯಕ್ತಿ ಯಾ ಪ್ರಾಣಿ; ನಮ್ಮಂತೆಯೇ ಒಬ್ಬ ವ್ಯಕ್ತಿ ಯಾ ಒಂದು ಪ್ರಾಣಿ.
  2. ಜೊತೆ; ಸಹ; ಅದೇ ಕೆಲಸದಲ್ಲಿ ತೊಡಗಿರುವ: fellow soldier ಸಹಸೈನಿಕ; ಜೊತೆಸಿಪಾಯಿ.
  3. ಸಮಾನಸಂಬಂಧಿ; ಅದೇ ವಸ್ತುವಿನೊಡನೆ ಅದೇ ಸಂಬಂಧ ಹೊಂದಿರುವ: fellow citizen ಸಹಪ್ರಜೆ.