See also 2stout
1stout ಸ್ಟೌಟ್‍
ಗುಣವಾಚಕ
  1. (ವ್ಯಕ್ತಿಗಳ ವಿಷಯದಲ್ಲಿ) ಬೊಜ್ಜುಮೈಯಿನ; ಸ್ಥೂಲಕಾಯದ; ದಡಿಯ; ದಪ್ಪ; ದಾಂಡಿಗ; ದುಡುಮ; ದಡೂತಿ: a stout fellow ದಡಿಯ (ವ್ಯಕ್ತಿ).
  2. ದಪ್ಪನಾಗಿ ಬಲವಾದ; ಭಾರಿ ಗಾತ್ರ ಮತ್ತು ಶಕ್ತಿಗಳುಳ್ಳ; ಮಜಬೂತಾದ: a stout stick ದಪ್ಪ ದೊಣ್ಣೆ. a stout ship ಭಾರಿ ಯಾ ಮಜಬೂತಾದ ಹಡಗು.
    1. ಧೀರ; ಕೆಚ್ಚೆದೆಯ; ವೀರ.
    2. ಬಲಿಷ್ಠ; ಗಟ್ಟಿ; ದಾರ್ಢ್ಯದ.
    3. ಬಿರುಸಿನ; ಕಸುವಿನ; ಹುರುಪಿನ; ಪ್ರಬಲ; ಸತ್ತ್ವಪೂರ್ಣ; ವೀರ್ಯವತ್ತಾದ: a stout resistance ಪ್ರಬಲ ಪ್ರತಿಭಟನೆ.
    4. ಸ್ಥೈರ್ಯದ; ದೃಢ; ಪಟ್ಟಿನ; ಹಟದ: a stout opponent ದೃಢ ವಿರೋಧಿ; ಪಟ್ಟು ಬಿಡದ ಎದುರಾಳಿ.
ಪದಗುಚ್ಛ
  1. a stout heart
    1. ಧೈರ್ಯ; ಕೆಚ್ಚೆದೆ.
    2. ದೃಢ – ಸಂಕಲ್ಪ, ಮನಸ್ಸು; ಸ್ಥೈರ್ಯ.
  2. stout fellow ಧೀರ, ಕೆಚ್ಚೆದೆಯ, ಬಲಿಷ್ಠ – ವ್ಯಕ್ತಿ.