See also 2fawn  3fawn  4fawn
1fawn ಹಾನ್‍
ನಾಮವಾಚಕ
  1. ಜಿಂಕೆಯ ಮರಿ; ಮೊದಲನೇ ವರ್ಷ ನಡೆಯುತ್ತಿರುವ, ಜಿಂಕೆಯ (ಹೆಣ್ಣು ಯಾ ಗಂಡು) ಮರಿ.
  2. ನಸುಹಳದಿ (ಗೂಡಿದ) ಕಂದು ಬಣ್ಣ.
ನುಡಿಗಟ್ಟು

in fawn (ಹೆಣ್ಣು ಜಿಂಕೆಯ ವಿಷಯದಲ್ಲಿ) ಗಬ್ಬದ.

See also 1fawn  3fawn  4fawn
2fawn ಹಾನ್‍
ಗುಣವಾಚಕ

ನಸುಹಳದಿಗೂಡಿದ ಕಂದು ಬಣ್ಣದ.

See also 1fawn  2fawn  4fawn
3fawn ಹಾನ್‍
ಸಕರ್ಮಕ ಕ್ರಿಯಾಪದ

(ಜಿಂಕೆಯ ವಿಷಯದಲ್ಲಿ) ಮರಿಹಾಕು; ಈಯು; ಪ್ರಸವಿಸು.

See also 1fawn  2fawn  3fawn
4fawn ಹಾನ್‍
ಅಕರ್ಮಕ ಕ್ರಿಯಾಪದ
  1. (ಪ್ರಾಣಿಗಳು, ಮುಖ್ಯವಾಗಿ ನಾಯಿಯ ವಿಷಯದಲ್ಲಿ) (ಬಾಲ ಆಡಿಸುವುದು, ನೆಲದ ಮೇಲೆ ಬಿದ್ದು ಹೊರಳಾಡುವುದು, ಮೊದಲಾದವುಗಳಿಂದ) ಮುದ್ದು ತೋರಿಸು; ತುಂಬ ಪ್ರೀತಿ ತೋರಿಸು; ಮಮತೆ ತೋರಿಸು.
  2. (ಮನುಷ್ಯರ ವಿಷಯದಲ್ಲಿ) ಅಡಿಯಾಳಂತೆ, ತೊತ್ತಿನಂತೆ – ನಡೆದುಕೊ; ದಾಸನಂತೆ, ಗುಲಾಮನಂತೆ ವರ್ತಿಸು.
  3. (ಆಶ್ರಯದಾತನ ಬಳಿ) ಹಲ್ಲುಕಿರಿ; ಗೋಗರೆ; ಹಲ್ಲುಗಿಂಜು; ಅಂಗಲಾಚು; ಮಾನಬಿಟ್ಟು ದೈನ್ಯತೆ ತೋರಿಸು.
ಪದಗುಚ್ಛ

fawn on, upon

  1. (ನೆಕ್ಕುವುದು, ನಾಲಿಗೆ ಚಾಚುವುದು, ಮೊದಲಾದ ವಿವಿಧ ಕುರುಹುಗಳಿಂದ) ಮುದ್ದಿಸು.
  2. ಅಂಗಲಾಚುವಂತೆ, ಅಡಿಯಾಳುತನ ತೋರಿಸುವಂತೆ – ಗೋಗರೆ.