See also 1fawn  2fawn  3fawn
4fawn ಹಾನ್‍
ಅಕರ್ಮಕ ಕ್ರಿಯಾಪದ
  1. (ಪ್ರಾಣಿಗಳು, ಮುಖ್ಯವಾಗಿ ನಾಯಿಯ ವಿಷಯದಲ್ಲಿ) (ಬಾಲ ಆಡಿಸುವುದು, ನೆಲದ ಮೇಲೆ ಬಿದ್ದು ಹೊರಳಾಡುವುದು, ಮೊದಲಾದವುಗಳಿಂದ) ಮುದ್ದು ತೋರಿಸು; ತುಂಬ ಪ್ರೀತಿ ತೋರಿಸು; ಮಮತೆ ತೋರಿಸು.
  2. (ಮನುಷ್ಯರ ವಿಷಯದಲ್ಲಿ) ಅಡಿಯಾಳಂತೆ, ತೊತ್ತಿನಂತೆ – ನಡೆದುಕೊ; ದಾಸನಂತೆ, ಗುಲಾಮನಂತೆ ವರ್ತಿಸು.
  3. (ಆಶ್ರಯದಾತನ ಬಳಿ) ಹಲ್ಲುಕಿರಿ; ಗೋಗರೆ; ಹಲ್ಲುಗಿಂಜು; ಅಂಗಲಾಚು; ಮಾನಬಿಟ್ಟು ದೈನ್ಯತೆ ತೋರಿಸು.
ಪದಗುಚ್ಛ

fawn on, upon

  1. (ನೆಕ್ಕುವುದು, ನಾಲಿಗೆ ಚಾಚುವುದು, ಮೊದಲಾದ ವಿವಿಧ ಕುರುಹುಗಳಿಂದ) ಮುದ್ದಿಸು.
  2. ಅಂಗಲಾಚುವಂತೆ, ಅಡಿಯಾಳುತನ ತೋರಿಸುವಂತೆ – ಗೋಗರೆ.