See also 2fault
1fault ಹಾಲ್ಟ್‍
ನಾಮವಾಚಕ
  1. (ನಡತೆ, ರಚನೆ, ತೋರ್ಕೆ, ಮೊದಲಾದವುಗಳಲ್ಲಿ) ಕುಂದು; ಕೊರತೆ; ನ್ಯೂನತೆ; ಲೋಪ; ದೋಷ; ಕಲಂಕ.
  2. ಅತಿಕ್ರಮಣ; ಉಲ್ಲಂಘನ; ಗೆರೆ, ಎಲ್ಲೆ, ಹದ್ದು – ಈರುವುದು.
  3. ತಪ್ಪಿತ; ಅಪರಾಧ.
  4. ತಪ್ಪು; ತಪ್ಪುಕೆಲಸ; ತಪ್ಪಾಗಿ ಮಾಡಿದ್ದು.
  5. (ಟೆನಿಸ್‍ ಮೊದಲಾದ ಆಟಗಳಲ್ಲಿ) ತಪ್ಪು (ಹೊಡೆತ); ತಪ್ಪಾಗಿ ಸರ್ವ್‍ ಮಾಡಿದ್ದು: double fault ಜೋಡಿ ತಪ್ಪು; ಎರಡು ಸಲ ಸತತವಾಗಿ ತಪ್ಪಾಗಿ ಸರ್ವ್‍ಮಾಡಿ ಪಾಯಿಂಟ್‍ ಕಳೆದುಕೊಳ್ಳುವುದು.
  6. ತಪ್ಪು; ತಪ್ಪಾದುದಕ್ಕೆ, ತಪ್ಪುಮಾಡಿದುದಕ್ಕೆ ಹೊಣೆ ಯಾ ಜವಾಬ್ದಾರಿ: the fault was mine ತಪ್ಪು ನನ್ನದೇ ಆಗಿತ್ತು.
  7. (ಯಾವುದೇ ಪರಿಣಾಮಕ್ಕೆ ಕಾರಣವಾದ) ತಪ್ಪು ಯಾ ದೋಷ: the fault is in the patient ತಪ್ಪು ರೋಗಿಯಲ್ಲೇ ಇದೆ; ದೋಷವಿರುವುದು ರೋಗಿಯಲ್ಲೇ.
  8. (ಬೇಟೆ) ವಾಸನೆ ತಪ್ಪಿಹೋಗುವುದು; ಸುಳಿವು ತಪ್ಪುವುದು.
  9. ವಾಸನೆ ಯಾ ಸುಳಿವು ತಪ್ಪಿದ್ದರಿಂದ ಆದ ತಡೆ, ಅಡ್ಡಿ, ಆಡಚಣೆ.
  10. (ಭೂವಿಜ್ಞಾನ) ದೋಷ; ಭೂಮಿಯಲ್ಲಿನ ಸ್ತರದ ಯಾ ಖನಿಜಭರಿತ ಎಳೆಯ ಅಖಂಡತೆಗೆ ಉಂಟಾಗಿರುವ ಊನ.
  11. (ತಂತಿಪ್ರಸರಣ) ಮಂಡಲದೋಷ; ವಿದ್ಯುನ್ಮಂಡಲದಲ್ಲಿನ ದೋಷ.
ನುಡಿಗಟ್ಟು
  1. at fault (ಪ್ರಾಚೀನ ಪ್ರಯೋಗ) ತಪ್ಪಿತಸ್ಥನಾಗಿ; ದೋಷಕ್ಕೆ ಕಾರಣನಾಗಿ: who is at fault? ತಪ್ಪಿತಸ್ಥನಾರು? ದೋಷಕ್ಕೆ ಕಾರಣನಾರು?
  2. be at fault ಗೊಂದಲಕ್ಕೀಡಾಗಿರು; ದಿಕ್ಕುತೋರದಿರು; ಗೊಂದಲದಲ್ಲಿ ಸಿಕ್ಕಿರು; ಏನು ಮಾಡಲೂ ತೋರದೆ ಇರು.
  3. find fault (with)
    1. ತಪ್ಪು ಕಂಡುಹಿಡಿ; ತಪ್ಪು ಹುಡುಕು; ದೋಷ ಕಂಡುಹಿಡಿ.
    2. ದೂರು; ದೂಷಿಸು; ಟೀಕಿಸು.
  4. (generous etc.) to a fault ಮಿತಿ ಈರಿದ (ಉದಾರ ಸ್ವಭಾವದ); ಅತಿ (ಉದಾರಿಯಾದ); (ಉದಾರತೆಯೇ ಒಂದು) ದೋಷವಾಗುವಷ್ಟು (ಉದಾರಿಯಾದ).
  5. in fault (ಪ್ರಾಚೀನ ಪ್ರಯೋಗ) = ನುಡಿಗಟ್ಟು \((1)\).
  6. with all faults ಎಲ್ಲ ದೋಷಗಳೊಡನೆ; ಕೊಳ್ಳುವವನ ಜವಾಬ್ದಾರಿಯ ಮೇಲೆ: no. 5400/4 to be taken away with all faults 5400/4ನೇ ನಂಬರಿನ ಸರಕನ್ನು ಎಲ್ಲ ದೋಷಗಳೊಡನೆ ಕೊಂಡೊಯ್ಯಬೇಕೆಂದು.
See also 1fault
2fault ಹಾಲ್ಟ್‍
ಸಕರ್ಮಕ ಕ್ರಿಯಾಪದ
  1. ತಪ್ಪು ಕಂಡುಹಿಡಿ; ದೋಷ ಹುಡುಕು.
  2. ದೂಷಿಸು; ಟೀಕಿಸು; ದೂರು.
  3. ತಪ್ಪು ಇದೆ ಎಂದು ಹೇಳು; ದೋಷಯುಕ್ತವೆಂದು ಘೋಷಿಸು.
  4. (ಭೂವಿಜ್ಞಾನ) ದೋಷ ಉಂಟುಮಾಡು; ಸ್ತರ ಯಾ ಖನಿಜದಿಂದ ಕೂಡಿದ ಎಳೆಯ ಅಖಂಡತೆಗೆ ಊನ ಉಂಟು ಮಾಡು.
ಅಕರ್ಮಕ ಕ್ರಿಯಾಪದ
  1. ತಪ್ಪುಮಾಡು.
  2. (ಭೂವಿಜ್ಞಾನ) (ಸ್ತರ ಯಾ ಖನಿಜಭರಿತ ಎಳೆಯ ಅಖಂಡತೆಯಲ್ಲಿ) ದೋಷ – ತೋರಿಸು, ಪ್ರಕಟಿಸು.