See also 2fathom
1fathom ಹ್ಯಾದಮ್‍
ನಾಮವಾಚಕ

(ಸಂಖ್ಯೆಯೊಡನೆ ಬಳಸಿದಾಗ ಕೆಲವೊಮ್ಮೆ ಬಹುವಚನ ಅದೇ) ಹ್ಯಾದಮ್‍:

  1. (ಮುಖ್ಯವಾಗಿ ನೀರಿನ ಆಳ ಕಂಡುಹಿಡಿಯುವಾಗ) ಆಳ; ಆಳುದ್ದ; ಒಂದು ಮಾರು; ಆರಡಿಯ ಅಳತೆ.
  2. (ಬ್ರಿಟಿಷ್‍ ಪ್ರಯೋಗ) ಉದ್ದ ಎಷ್ಟೇ ಇರಲಿ, ಅಡ್ಡಕೊಯ್ತದ ಅಳತೆಯಲ್ಲಿ ಆರಡಿ ಚಚ್ಚೌಕವಿರುವ ಮರದ ಮೊತ್ತ.
See also 1fathom
2fathom ಹ್ಯಾದಮ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) (ಅಳತೆ ಮಾಡುವಾಗ ಚಾಚುವಂತೆ, ಎರಡು ಕೈಗಳನ್ನೂ ಚಾಚಿ) ತಬ್ಬಿಕೊ.
  2. (ಅಳತೆಯ ದಾರ ಮೊದಲಾದವುಗಳಿಂದ ನೀರಿನ) ಆಳ ಕಂಡುಹಿಡಿ; ಆಳವನ್ನು ಅಳೆ.
  3. (ರೂಪಕವಾಗಿ) (ರಹಸ್ಯ, ಉದ್ದೇಶ, ಮೊದಲಾದವನ್ನು) ಬುಡಮಟ್ಟ ಶೋಧಿಸು; ತಳಹತ್ತನೋಡು; ಆಳತಿಳಿ; ಸಂಪೂರ್ಣವಾಗಿ ಅರಿ; ಪೂರ್ತಿ ಅರ್ಥ ಮಾಡಿಕೊ.