See also 2far  3far
1far ಹಾರ್‍
ಕ್ರಿಯಾವಿಶೇಷಣ

(ತರರೂಪ farther, further; ತಮರೂಪ farthest, furthest).

  1. ದೂರದಲ್ಲಿ; ದೂರಕ್ಕೆ; ದೂರವಾಗಿ: how far did you go? ನೀವು ಎಷ್ಟು ದೂರ ಹೋಗಿದ್ದಿರಿ?
  2. ಬಹಳ ದೂರಕ್ಕೆ; ತುಂಬ ದೂರವಾಗಿ: we didn’t go far ನಾವು ಬಹಳ ದೂರ ಹೋಗಲಿಲ್ಲ. driven far into the ground ನೆಲದೊಳಕ್ಕೆ ತುಂಬ ದೂರ ನಾಟಿಸಿ.
  3. (ಕಾಲದ ವಿಷಯದಲ್ಲಿ) ತುಂಬ ಹೊತ್ತು; ಬಹಳ ಹಿಂದೆ ಯಾ ಮುಂದೆ: talked far into the night ರಾತ್ರಿ ತುಂಬ ಹೊತ್ತಿನವರೆಗೆ ಮಾತಾಡಿದರು.
  4. ತುಂಬ; ಬಹಳ; ಹೆಚ್ಚು; far different ತುಂಬ ವ್ಯತ್ಯಾಸವಿರುವ. far better ಹೆಚ್ಚು ಉತ್ತಮ. far the best ಬಹಳ ಶ್ರೇಷ್ಠ; ಅತ್ಯುತ್ತಮ.
ಪದಗುಚ್ಛ
  1. as far as
    1. (ಸ್ಥಳದ ವಿಷಯದಲ್ಲಿ) ಅಲ್ಲಿಯವರೆಗೂ.
    2. ಎಲ್ಲಿಯವರೆಗಾದರೂ; ಎಷ್ಟು ದೂರಕ್ಕಾದರೂ: travel as far as you like ನಿನಗೆ ಎಲ್ಲಿಯವರೆಗೆ ಇಷ್ಟವೋ ಅಲ್ಲಿಯವರೆಗೂ ಪ್ರಯಾಣ ಮಾಡು.
    3. ಆ ಮಟ್ಟಿಗೆ; ಅಷ್ಟರ ಮಟ್ಟಿಗೆ: as far as I can ನನ್ನ ಕೈಲಾದ ಮಟ್ಟಿಗೆ.
    4. ಅದೇ ದೂರ; ಅಷ್ಟೇ ದೂರ: we didn’t go as far as others ನಾವು ಉಳಿದವರು ಹೋದಷ್ಟು ದೂರ ಹೋಗಲಿಲ್ಲ.
  2. far forth ಅಷ್ಟರವರೆಗೂ.
  3. from far ಬಹಳ ದೂರದಿಂದ; ತುಂಬ ದೂರದಿಂದ; ಸಾಕಷ್ಟು ದೂರದಿಂದ.
  4. how far
    1. ಎಷ್ಟುಮಟ್ಟಿಗೆ; ಎಷ್ಟರವರೆಗೆ; ಎಲ್ಲಿಯವರೆಗೆ.
    2. ಎಷ್ಟು ದೂರ.
  5. (in) so far as ಅಷ್ಟುಮಟ್ಟಿಗೆ; ಅಷ್ಟರಮಟ್ಟಿಗೆ; ಅಲ್ಲಿಯವರೆಗೆ; ಅದರವರೆಗೆ.
  6. so far
    1. ಅಷ್ಟುದೂರ; ಅಲ್ಲಿಯ – ವರೆಗೆ, ತನಕ.
  7. so far as
    1. = ಪದಗುಚ್ಛ \((1)\).
    2. = ಪದಗುಚ್ಛ \((5)\).
  8. so far forth as ಎಷ್ಟರವರೆಗೆ ಇದೆಯೋ ಅಷರವರೆಗೂ.
ನುಡಿಗಟ್ಟು
  1. by far
    1. ಬಹಳ – ಹೆಚ್ಚಾಗಿ, ಅಧಿಕವಾಗಿ: expensive by far ಬಹಳ ದುಬಾರಿಯಾಗಿ.
    2. ಸ್ಪಷ್ಟವಾಗಿ; ವಿಸ್ಪಷ್ಟವಾಗಿ; ನಿಸ್ಸಂಶಯವಾಗಿ: by far the best ಸ್ಪಷ್ಟವಾಗಿಯೇ ಅತ್ಯುತ್ತಮ.
  2. far and away
    1. ಅತ್ಯಂತ ಹೆಚ್ಚಾಗಿ; ಬಹಳ ಅಂತರದಿಂದ.
    2. ನಿಸ್ಸಂದೇಹವಾಗಿ; ನಿಸ್ಸಂದಿಗ್ಧವಾಗಿ: he is far and away the best player on the team ಅವನು ನಿಸ್ಸಂದಿಗ್ಧವಾಗಿ ಆ ತಂಡದ ಅತ್ಯುತ್ತಮ ಆಟಗಾರ.
  3. far and near ಎಲ್ಲೆಡೆಯಲ್ಲಿಯೂ; ಎಲ್ಲೆಲ್ಲಿಯೂ; ಎಲ್ಲಾ ಕಡೆಯೂ; ಎಲ್ಲ ಸ್ಥಳದಲ್ಲಿಯೂ; ಎಲ್ಲೆಡೆಯೂ; ಎಲ್ಲಾ ದಿಕ್ಕಿನಲ್ಲಿಯೂ; ಸರ್ವತ್ರ: he searched for the child far and near ಅವನು ಎಲ್ಲಾ ಕಡೆಯೂ ಮಗುವಿಗಾಗಿ ಹುಡುಕಿದ.
  4. far and wide ಬಹು ದೂರದವರೆಗೆ; ವಿಶಾಲವಾಗಿ; ವ್ಯಾಪಕವಾಗಿ.
  5. far back ಬಹಳ ಹಿಂದೆ; ಪ್ರಾಚೀನಕಾಲದಲ್ಲಿ.
  6. far be it from me to .... (ಟೀಕಿಸುವುದು, ಮಧ್ಯೆಬಾಯಿ ಹಾಕುವುದು, ಮೊದಲಾದವುಗಳ ವಿಷಯದಲ್ಲಿ) ಅದು ನನಗೆ ಇಷ್ಟವಿಲ್ಲ; ನಾನು ಅದನ್ನು ಮಾಡಲಾರೆ; ನನ್ನಿಂದ ಅದು ಎಂದಿಗೂ ಆಗದು.
  7. far between
    1. ಅಪರೂಪವಾದ; ವಿರಳವಾದ.
    2. ಅಪರೂಪವಾಗಿ; ವಿರಳವಾಗಿ.
    3. ಬಹುಕಾಲ ಬಿಟ್ಟು ಬರುವ; ಬಹಳ ಅಂತರವಿರುವ.
  8. far from ಪ್ರತಿಯಾಗಿ; ದೂರವಾಗಿ; ಒಂದರಂತೆ ಇರುವುದರ ಬದಲು ಅದಕ್ಕೆ ವಿರುದ್ಧವಾಗಿ: the problem is far from easy ಸಮಸ್ಯೆ ಸುಲಭವಾಗಿಲ್ಲ. far from depending himself he apologised ತನ್ನನ್ನು ಸಮರ್ಥಿಸಿಕೊಳ್ಳುವ ಬದಲು ಅವನು ಕ್ಷಮೆ ಕೋರಿದ. his work is far from satisfactory ಅವನ ಕೆಲಸ ತೃಪ್ತಿಕರವಾಗಿಲ್ಲ.
  9. far from it ಅದಕ್ಕೆ ಬಹುದೂರ; ಅದಕ್ಕಿಂತ ಬಹಳ ಬೇರೆಯಾಗಿದೆ.
  10. go far
    1. (ವ್ಯಕ್ತಿಗಳ ವಿಷಯದಲ್ಲಿ) ಮುಂದುವರೆ; ಸಾಧಿಸು; ಯಶಸ್ಸು ಗಳಿಸು: he is bold and will go far ಅವನು ಧೀರ, ಬಹಳ ಮುಂದುವರೆಯುತ್ತಾನೆ, ಸಾಧಿಸುತ್ತಾನೆ.
    2. ಸಹಾಯಮಾಡು; ಮಾಡಲು ಯಾ ನೆರವೇರಿಸಲು ನೆರವಾಗು: go far to alleviate the suffering ಸಂಕಟವನ್ನು ಶಮನಗೊಳಿಸಲು ನೆರವಾಗಿ.
    3. (ಹಣದ ವಿಷಯದಲ್ಲಿ) (ಸರಕು, ಸೇವೆ, ಮೊದಲಾದವನ್ನು) ಕೊಳ್ಳಲು ಸಾಕಾಗು, ಶಕ್ತವಾಗು: a rupee does not go so far today as it did ten years ago ಹತ್ತು ವರ್ಷಗಳ ಹಿಂದೆ ಒಂದು ರೂಪಾಯಿ ಕೊಳ್ಳುತ್ತಿದ್ದಷ್ಟು ಇಂದು ಕೊಳ್ಳುವುದಿಲ್ಲ.
  11. go too far (ವಿವೇಚನೆ, ವಿನಯ, ಮೊದಲಾದವುಗಳ ವಿಷಯದಲ್ಲಿ) ಹದ್ದು ಈರಿ ಹೋಗು; ಅತಿಯಾಗಿ ಹೋಗು; ಅತಿಕ್ರಮಿಸಿ ಹೋಗು.
  12. not go far ಬೇಗನೆ ವ್ಯಯವಾಗಿಬಿಡು ಯಾ ಬಳಸಲ್ಪಡು.
  13. so far so good ಪ್ರಗತಿ ತೃಪ್ತಿಕರವಾಗಿದೆ; ಇಲ್ಲಿಯವರೆಗೆ ಸರಿಯಾಗಿದೆ, ಚೆನ್ನಾಗಿದೆ, ತೊಂದರೆಯಿಲ್ಲ. the work is difficult but so far so good ಕೆಲಸ ಕಷ್ಟ, ಆದರೆ ಇಲ್ಲಿಯವರೆಗೆ ಸರಿಯಾಗಿದೆ.
See also 1far  3far
2far ಹಾರ್‍
ನಾಮವಾಚಕ

ದೂರ: do you come from far? ನೀವು ದೂರದಿಂದ ಬಂದಿರಾ?

See also 1far  2far
3far ಹಾರ್‍
ಗುಣವಾಚಕ

(ತರರೂಪ farther, further, ತಮರೂಪ farthest, furthest).

  1. (ಸ್ಥಳ, ಕಾಲಗಳ ವಿಷಯದಲ್ಲಿ) ದೂರದ; ಬಹುದೂರದ.
  2. ಆ ಕಡೆಯ; ಅತ್ತ ಕಡೆಯ; ದೂರದ: the far end of the hall ಅಂಗಳದ ಆ ಕಡೆಯ ತುದಿ ಯಾ ದೂರದ ತುದಿ.
ನುಡಿಗಟ್ಟು
  1. a far $^1$cry.
  2. a far cry from ಬಹುದೂರದ; ಬಹಳ – ಅಂತರದ, ವ್ಯತ್ಯಾಸವಿರುವ: passing an examination is a far cry from being admitted to a technical institution ಪರೀಕ್ಷೆ ಪಾಸು ಮಾಡುವುದಕ್ಕೂ ತಾಂತ್ರಿಕ ಶಿಕ್ಷಣ ಶಾಲೆಯಲ್ಲಿ ಪ್ರವೇಶ ಪಡೆಯುವುದಕ್ಕೂ ಬಹಳ ಅಂತರವಿದೆ.