See also 2cry
1cry ಕ್ರೈ
ನಾಮವಾಚಕ
  1. (ವ್ಯಥೆ, ನೋವು, ಭಯ ಮೊದಲಾದವುಗಳ ಸೂಚನೆಯಾದ) ಅಳು; ರೋದನ; ಚೀತ್ಕಾರ; ಬೊಬ್ಬೆ; ಅರಚುವಿಕೆ; ಗೋಳಾಟ; ಕಿರಿಚಾಟ; ಆರ್ತನಾದ.
  2. (ಸಂತೋಷ ಮೊದಲಾದವುಗಳ ಸೂಚನೆಯಾದ) ಕೂಗು; ಕೇಕೆ; ಬೊಬ್ಬೆ.
  3. ಬೇಡಿಕೆ; ಕೇಳಿಕೆ; ಮೊರೆ.
  4. (ಪ್ರಾಣಿಯ) ಕೂಗು.
  5. (ಬೇಟೆನಾಯಿಯ) ಬೊಗಳು; ಗಳ್ಳು; ಊಳು; ಊಳಮೆ.
  6. ಬೇಟೆನಾಯಿಗಳ ತಂಡ.
  7. ಪೇರಿಕೂಗು; ಬೀದಿವ್ಯಾಪಾರಿಯ ಕೂಗು.
  8. ಜಾಹೀರಾತು; ಪ್ರಚಾರ.
  9. ಘೋಷಣೆ.
  10. ವದಂತಿ; ಗಾಳಿಸಮಾಚಾರ; ಬೀದಿಸುದ್ದಿ; ಜನರಕೂಗು; ಮಂದಿಮಾತು.
  11. ಧ್ಯೇಯವಾಕ್ಯ.
  12. ಜನಾಭಿಪ್ರಾಯ; ಪ್ರಜಾಮತ; ಜನತೆಯ ಕೂಗು.
  13. ಕಾತರದ ಕೂಗು.
  14. ತಗಡಿನ ಸದ್ದು; ತಗಡು ಮೊದಲಾದವನ್ನು ಬಗ್ಗಿಸಿದಾಗ ಆಗುವ ಶಬ್ದ.
ನುಡಿಗಟ್ಟು
  1. a far cry ಬಹುದೂರ.
  2. all the cry ಜನಮೆಚ್ಚು; ಎಲ್ಲೆಲ್ಲೂ ಇರುವ ಪದ್ಧತಿ.
  3. a long cry = ನುಡಿಗಟ್ಟು \((1)\).
  4. cry from the heart = cri de coeur.
  5. follow in the cry ಲೆಕ್ಕಕ್ಕೆ ಬಾರದವರ ಗುಂಪಿನಲ್ಲಿ ಸೇರು; ಕುರಿಹಿಂಡಿನಲ್ಲಿ ಕುರಿಯಾಗು; ವಿಚಾರಹೀನರನ್ನು ಅನುಸರಸಿ ಹೋಗು.
  6. have a good cry ಮನಃಪೂರ್ತಿ ಅತ್ತುಬಿಡು; ಪೂರಾ, ಚೆನ್ನಾಗಿ–ಅತ್ತುಬಿಡು.
  7. in full cry
    1. (ನಾಯಿಗಳು ಬೇಟೆಯ ಪ್ರಾಣಿಯನ್ನು ಬೆನ್ನಟ್ಟುವಾಗ) ಎಲ್ಲವೂ ಒಟ್ಟಿಗೆ ಬೊಗಳುತ್ತ.
    2. ಯಾರ ಮೇಲಾದರೂ–ಜೋರಿನಿಂದ ಬೀಳುತ್ತ, ಬಿರುಸಿನಿಂದ ಎರಗುತ್ತಾ.
  8. much cry and little wool ಅಬ್ಬರ ಬಹಳ, ಆದಾಯ ಯಾ ಲಾಭ ಕಡಮೆ.
  9. out of all cry ಲೆಕ್ಕಹಾಕಲಾಗದಷ್ಟು ಅತಿಯಾಗಿ; ಎಣಿಸಲಾಗದಷ್ಟು ಹೆಚ್ಚಾಗಿ.
  10. the cry = ನುಡಿಗಟ್ಟು \((2)\).
  11. within cry ಕೂಗಳತೆಯಲ್ಲಿ; ಹತ್ತಿರದಲ್ಲಿ.