See also 2fancy  3fancy
1fancy ಹ್ಯಾನ್ಸಿ
ನಾಮವಾಚಕ
  1. ಭ್ರಾಂತಿ; ಭ್ರಮೆ; ನಿರಾಧಾರವಾದ, ಬುಡವಿಲ್ಲದ – ನಂಬಿಕೆ.
  2. ಕಲ್ಪನಾಶಕ್ತಿ; ಎದುರಿಗಿಲ್ಲದವನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬಲ್ಲ ಶಕ್ತಿ; ಮನಶ್ಚಿತ್ರಗಳನ್ನು ರಚಿಸಬಲ್ಲ ಶಕ್ತಿ.
  3. ಮಾನಸಿಕ ಚಿತ್ರ; ಕಲ್ಪನಾಚಿತ್ರ.
  4. ತೋರಿದಂಥ ಊಹೆ; ತರ್ಕ ಯಾ ಅನುಭವವನ್ನು ಆಧರಿಸಿದ ಊಹೆ; ಬುಡವಿಲ್ಲದ, ನಿರಾಧಾರವಾದ ಊಹೆ.
  5. ಖುಷಿ; ಖಯಾಲು; ಚಪಲ; ಇದ್ದಕ್ಕಿದ್ದಂತೆ ಹುಟ್ಟುವ ಭಾವನೆ ಯಾ ಆಸಕ್ತಿ.
  6. (ವೈಯಕ್ತಿಕ) ಅಭಿರುಚಿ; ಇಚ್ಛೆ; ಪ್ರವೃತ್ತಿ; ಒಲವು; ಖಯಾಲು.
  7. (ಉತ್ತಮ ಗುಣಗಳು ಮೂಡುವಂತೆ) ತಳಿ ಬೆಳೆಸುವ ಕಲೆ.
  8. ಅಲಂಕಾರದ ಕೇಕು; ಅಲಂಕಾರ ಮಾಡಿದ ಕೇಕು.
  9. ಹವ್ಯಾಸಿಗಳು; ಆಸಕ್ತರು; ನಿರ್ದಿಷ್ಟ ಹವ್ಯಾಸವನ್ನುಳ್ಳವರು, ಮುಖ್ಯವಾಗಿ ಮುಷ್ಟಿಕಾಳಗದ ಪೋಷಕರು.
ಪದಗುಚ್ಛ

the fancy ಹವ್ಯಾಸಿಗಳು; ಯಾವುದೇ ನಿರ್ದಿಷ್ಟ ಹವ್ಯಾಸವುಳ್ಳವರು.

ನುಡಿಗಟ್ಟು
  1. a passing fancy ಕ್ಷಣಿಕಾಸಕ್ತಿ; ಅಲ್ಪಾವಧಿಗೆ ಮಾತ್ರ ಮನಸ್ಸು ಹಿಡಿದಿಟ್ಟಿರುವ ಆಸಕ್ತಿ.
  2. catch the fancy of ಆಸಕ್ತಿ ಸೆಳೆ; ಮನಸ್ಸು ಹಿಡಿ; ಅನುರಾಗ ಹುಟ್ಟಿಸು; ಮನವೊಲಿಸು; ಮೆಚ್ಚುಗೆ ಗಳಿಸು.
  3. take a fancy to (or for).
    1. ಅಭಿರುಚಿ ತಳೆ; ಆಸಕ್ತಿ ಉಳ್ಳವನಾಗು.
    2. ಪ್ರೀತಿ ಯಾ ಮಮತೆಯನ್ನು ತಾಳು.
See also 1fancy  3fancy
2fancy ಹ್ಯಾನ್ಸಿ
ಗುಣವಾಚಕ
  1. ಅಲಂಕಾರದ; ಸಾದಾ ಅಲ್ಲದ: fancy bread ಅಲಂಕಾರ ಮಾಡಿ (ಮನ ಸೆಳೆಯುವಂತೆ) ತಯಾರಿಸಿದ ಬ್ರೆಡ್ಡು.
  2. (ಹೂವುಗಳು ಮೊದಲಾದವುಗಳ ವಿಷಯದಲ್ಲಿ) ಬೆರಕೆ ಬಣ್ಣದ; ಮಿಶ್ರ ವರ್ಣದ; ಬಣ್ಣಬಣ್ಣದ; ಚಿತ್ರವರ್ಣದ.
  3. ತೋರಿದಂತೆ ನಡೆಯುವ; ಇಷ್ಟಬಂದಂತೆ ವರ್ತಿಸುವ; ಮನಸೋ ಇಚ್ಛೆ ನಡೆಯುವ.
  4. ಯದ್ವಾತದ್ವಾ; ಮನಸ್ಸಿಗೆ – ತೋರಿದ, ಬಂದ; ಮೆಚ್ಚಿಕೆ ಬೆಲೆಯ: at a fancy price ಮನಸ್ಸಿಗೆ ತೋರಿದಂತೆ ಹೇಳಿದ ಬೆಲೆಗೆ.
  5. ಕೇವಲ ಕಲ್ಪನೆಯ; ಕಲ್ಪಿತ; ಅವಾಸ್ತವಿಕವಾದ; ವಾಸ್ತವಾಂಶದ ಆಧಾರವಿಲ್ಲದೆ ಬರಿ ಕಲ್ಪನೆಯ ಆಧಾರದಿಂದಲೇ ಸೃಷ್ಟಿಸಿದ: fancy picture ಕಲ್ಪಿತಚಿತ್ರ; ಕಲ್ಪನಾಚಿತ್ರ.
  6. (ಅಮೆರಿಕನ್‍ ಪ್ರಯೋಗ) (ಆಹಾರ ಮೊದಲಾದವುಗಳ ವಿಷಯದಲ್ಲಿ) ಮೇಲ್ಮಟ್ಟದ; ಉತ್ತಮ ಗುಣದ; ಸಾಮಾನ್ಯ ಮಟ್ಟಕ್ಕಿಂತ ಮೇಲಿನ.
  7. (ಪ್ರಾಣಿಯ ವಿಷಯದಲ್ಲಿ) ಉದ್ದೇಶಿಸಿದ ಉತ್ತಮ ಗುಣ, ಸೌಂದರ್ಯ, ಮೊದಲಾದವು ಮೂಡುವಂತೆ ತಳಿ ಬೆಳೆಸಿದ.
See also 1fancy  2fancy
3fancy ಹ್ಯಾನ್ಸಿ
ಸಕರ್ಮಕ ಕ್ರಿಯಾಪದ
  1. ಕಲ್ಪಿಸಿಕೊ; ಭಾವಿಸಿಕೊ; ಊಹಿಸಿಕೊ; ಮನಸ್ಸಿನಲ್ಲಿ ಚಿತ್ರಿಸಿಕೊ: fancy oneself dead ತಾನೇ ಸತ್ತಂತೆ ಭಾವಿಸಿಕೊ.
  2. (ಆಶ್ಚರ್ಯಸೂಚಿಸುವ ವಿಧ್ಯರ್ಥಕ ಉದ್ಗಾರ) fancy! ಊಹಿಸಿಕೊ! ಊಹಿಸಿಕೊಂಡು ನೋಡು! fancy his believing it! ಅವನು ಅಂಥ ಮಾತನ್ನು ನಂಬಿದ ಎಂಬುದನ್ನು – ಊಹಿಸಿಕೊಂಡರೆ! ಕಲ್ಪಿಸಿಕೊಂಡರೆ!
  3. (ಹಾಗೆಂದು) ಎಣಿಸು; ಯೋಚನೆ ಮಾಡು; ಯೋಚಿಸು; ಭಾವಿಸು.
  4. (ಆಡುಮಾತು) (ತನ್ನ, ತನ್ನ ಸಾಮರ್ಥ್ಯ, ಮೊದಲಾದವುಗಳ ವಿಷಯದಲ್ಲಿ) ಅತಿಯಾದ ಭಾವನೆ ಹೊಂದು; ಮಿತಿಈರಿದ ಅಭಿಪ್ರಾಯ ತಳೆ; ಉಚಿತವಾದುದಕ್ಕಿಂತಲೂ ಹೆಚ್ಚಿನ ಮೆಚ್ಚುಗೆ ತೋರು.
  5. ಒಲವು ತೋರು; ಮೆಚ್ಚಿಕೊ; ಪ್ರೀತಿಸು.
  6. (ಪ್ರಾಣಿಗಳನ್ನೂ ಸಸ್ಯಗಳನ್ನೂ ಕೆಲವು ಅಂಶಗಳಿಗೆ ವಿಶೇಷ ಗಮನ ಕೊಟ್ಟು) ತಳಿ ಬೆಳೆಸು; ಸಾಕು; ಪಾಲನೆ ಮಾಡು.