See also 2fancy  3fancy
1fancy ಹ್ಯಾನ್ಸಿ
ನಾಮವಾಚಕ
  1. ಭ್ರಾಂತಿ; ಭ್ರಮೆ; ನಿರಾಧಾರವಾದ, ಬುಡವಿಲ್ಲದ – ನಂಬಿಕೆ.
  2. ಕಲ್ಪನಾಶಕ್ತಿ; ಎದುರಿಗಿಲ್ಲದವನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬಲ್ಲ ಶಕ್ತಿ; ಮನಶ್ಚಿತ್ರಗಳನ್ನು ರಚಿಸಬಲ್ಲ ಶಕ್ತಿ.
  3. ಮಾನಸಿಕ ಚಿತ್ರ; ಕಲ್ಪನಾಚಿತ್ರ.
  4. ತೋರಿದಂಥ ಊಹೆ; ತರ್ಕ ಯಾ ಅನುಭವವನ್ನು ಆಧರಿಸಿದ ಊಹೆ; ಬುಡವಿಲ್ಲದ, ನಿರಾಧಾರವಾದ ಊಹೆ.
  5. ಖುಷಿ; ಖಯಾಲು; ಚಪಲ; ಇದ್ದಕ್ಕಿದ್ದಂತೆ ಹುಟ್ಟುವ ಭಾವನೆ ಯಾ ಆಸಕ್ತಿ.
  6. (ವೈಯಕ್ತಿಕ) ಅಭಿರುಚಿ; ಇಚ್ಛೆ; ಪ್ರವೃತ್ತಿ; ಒಲವು; ಖಯಾಲು.
  7. (ಉತ್ತಮ ಗುಣಗಳು ಮೂಡುವಂತೆ) ತಳಿ ಬೆಳೆಸುವ ಕಲೆ.
  8. ಅಲಂಕಾರದ ಕೇಕು; ಅಲಂಕಾರ ಮಾಡಿದ ಕೇಕು.
  9. ಹವ್ಯಾಸಿಗಳು; ಆಸಕ್ತರು; ನಿರ್ದಿಷ್ಟ ಹವ್ಯಾಸವನ್ನುಳ್ಳವರು, ಮುಖ್ಯವಾಗಿ ಮುಷ್ಟಿಕಾಳಗದ ಪೋಷಕರು.
ಪದಗುಚ್ಛ

the fancy ಹವ್ಯಾಸಿಗಳು; ಯಾವುದೇ ನಿರ್ದಿಷ್ಟ ಹವ್ಯಾಸವುಳ್ಳವರು.

ನುಡಿಗಟ್ಟು
  1. a passing fancy ಕ್ಷಣಿಕಾಸಕ್ತಿ; ಅಲ್ಪಾವಧಿಗೆ ಮಾತ್ರ ಮನಸ್ಸು ಹಿಡಿದಿಟ್ಟಿರುವ ಆಸಕ್ತಿ.
  2. catch the fancy of ಆಸಕ್ತಿ ಸೆಳೆ; ಮನಸ್ಸು ಹಿಡಿ; ಅನುರಾಗ ಹುಟ್ಟಿಸು; ಮನವೊಲಿಸು; ಮೆಚ್ಚುಗೆ ಗಳಿಸು.
  3. take a fancy to (or for).
    1. ಅಭಿರುಚಿ ತಳೆ; ಆಸಕ್ತಿ ಉಳ್ಳವನಾಗು.
    2. ಪ್ರೀತಿ ಯಾ ಮಮತೆಯನ್ನು ತಾಳು.