See also 2fan  3fan
1fan ಹ್ಯಾನ್‍
ನಾಮವಾಚಕ
  1. ಬೀಸಣಿಗೆ, ಸಾಮಾನ್ಯವಾಗಿ ಮಡಿಕೆ ಬೀಸಣಿಗೆ.
  2. (ಮುಖ್ಯವಾಗಿ ಹಕ್ಕಿಯ ತೋಕೆ, ರೆಕ್ಕೆ, ಎಲೆ, ಕಟ್ಟಡದ ಛಾವಣಿಯಲ್ಲಿನ ಅಲಂಕಾರದ ಕಮಾನು, ಮೊದಲಾದ) ಬೀಸಣಿಗೆ; ಬೀಸಣಿಗೆಯಂತೆ ಬಿಚ್ಚಿ ಹರಡಿದ ಯಾವುದೇ ವಸ್ತು: fan tracery ಬೀಸಣಿಗೆ ಜಾಲರ.
  3. ಹ್ಯಾನು; ಪಂಖ; ತಿರುಗುಬೀಸಣಿಗೆ; ಕೊಠಡಿ ಮೊದಲಾದವುಗಳಲ್ಲಿ ಗಾಳಿ ಚೆನ್ನಾಗಿ ಆಡುವಂತೆ ಗಾಳಿಯ ಪ್ರವಾಹವನ್ನುಂಟುಮಾಡುವ ತಿರುಗು ಸಲಕರಣೆ: table fan ಮೇಜು ಪಂಖ.
  4. (ಧಾನ್ಯವನ್ನು) ತೂರುವ ಯಂತ್ರ.
  5. (ನೌಕಾಯಾನ) ತಿರುಪುನೋದಕದ, ತಿರುಪು ಪ್ರೊಪೆಲರಿನ – ಅಲಗು.
  6. (ನೌಕಾಯಾನ) ನೋದಕ; ಪ್ರೊಪೆಲರು.
  7. ಪಂಖಹಾಯಿ; ಗಾಳಿಗಿರಣಿಯಲ್ಲಿ ಗಾಳಿಯ ದಿಕ್ಕಿಗೆ ದೊಡ್ಡ ಹಾಯಿಯನ್ನು ಒಡ್ಡುವಂತೆ ಅಳವಡಿಸಿರುವ ಸಣ್ಣಹಾಯಿ.
  8. ಬೀಸಣಿಗೆ ಮೆಕ್ಕಲು; ಮುಖ್ಯವಾಗಿ ನದಿ ಇಳಿಜಾರಿನಲ್ಲಿ ನಿಧಾನವಾಗಿ ಇಳಿಯುವಾಗ ಆಗುವ ಬೀಸಣಿಗೆಯಾಕಾರದ ನೆರೆಮಣ್ಣು ಯಾ ಮೆಕ್ಕಲು ಮಣ್ಣು.
See also 1fan  3fan
2fan ಹ್ಯಾನ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ fanned, ವರ್ತಮಾನ ಕೃದಂತ fanning).
ಸಕರ್ಮಕ ಕ್ರಿಯಾಪದ
  1. ಬೀಸಣಿಗೆ ಬೀಸು; ಬೀಸಣಿಗೆಯಿಂದ ಗಾಳಿ ಹಾಕು.
  2. (ಮುಖ ಮೊದಲಾದವನ್ನು ತಂಪು ಮಾಡಿಕೊಳ್ಳಲು ಯಾ ಉರಿಯನ್ನು ಹೊತ್ತಿಸಲು ಬೀಸಣಿಗೆಯಿಂದ) ಗಾಳಿ ಹರಿಸು; ಗಾಳಿ ಆಡಿಸು.
  3. (ಬೀಸಣಿಗೆಯ ಆಕಾರದಲ್ಲಿ) ಹರಡು; ಬಿಚ್ಚು; ಕೆದರು.
  4. (ಮಂದಮಾರುತದ ವಿಷಯದಲ್ಲಿ, ಬೀಸಣಿಗೆಯಂತೆ) ಮೃದುವಾಗಿ ಬೀಸು; ಮೆಲ್ಲನೆ ಬೀಸು; ಮೆಲ್ಲನೆ ಬೀಸಿ ತಂಪು ಮಾಡು.
  5. (ಧಾನ್ಯವನ್ನು) ತೂರು; ಕೇರು.
  6. (ಜೊಳ್ಳನ್ನು, ಹೊಟ್ಟನ್ನು) ತೂರಿ ಬಿಡು; ಕೇರಿಬಿಡು; ಉರುಬಿಬಿಡು.
  7. (ಅಶಿಷ್ಟ) (ಆಯುಧ ಮೊದಲಾದವುಗಳಿಗಾಗಿ) ವ್ಯಕ್ತಿಯನ್ನು ಶೋಧಿಸು.
  8. (ಬೇಸ್‍ಬಾಲ್‍ ಆಟ) (ಬ್ಯಾಟುಗಾರರನ್ನು) ಹೊಡೆದು ಔಟಾಗಿಸು.
ಅಕರ್ಮಕ ಕ್ರಿಯಾಪದ

ಬೀಸಣಿಗೆಯಂತೆ – ಬಿಚ್ಚಿಕೊ, ಹರಡಿಕೊ, ಕೆದರಿಕೊ: the security men fanned out in all directions ರಕ್ಷಕ ಪಡೆಯವರು ಎಲ್ಲಾ ದಿಕ್ಕಿನಲ್ಲಿಯೂ ಹರಡಿಕೊಂಡರು.

ಪದಗುಚ್ಛ
  1. fan the flame
    1. ಉರಿ ಹೆಚ್ಚಿಸು; ಜ್ವಾಲೆ ಹೆಚ್ಚಿಸು.
    2. (ರೂಪಕವಾಗಿ) ಉದ್ರೇಕ ಹೆಚ್ಚಿಸು.
  2. fan out = 2fan (ಅಕರ್ಮಕ ಕ್ರಿಯಾಪದ).
See also 1fan  2fan
3fan ಹ್ಯಾನ್‍
ನಾಮವಾಚಕ

(fanatic ಎಂಬುದರ ಸಂಕ್ಷಿಪ್ತ) ಭಕ್ತ; ಅಭಿಮಾನಿ; ಆಸಕ್ತ; ಕಟ್ಟಾಭಿಮಾನಿ: film fans ಚಲನಚಿತ್ರದ ಭಕ್ತರು.