See also 2fan  3fan
1fan ಹ್ಯಾನ್‍
ನಾಮವಾಚಕ
  1. ಬೀಸಣಿಗೆ, ಸಾಮಾನ್ಯವಾಗಿ ಮಡಿಕೆ ಬೀಸಣಿಗೆ.
  2. (ಮುಖ್ಯವಾಗಿ ಹಕ್ಕಿಯ ತೋಕೆ, ರೆಕ್ಕೆ, ಎಲೆ, ಕಟ್ಟಡದ ಛಾವಣಿಯಲ್ಲಿನ ಅಲಂಕಾರದ ಕಮಾನು, ಮೊದಲಾದ) ಬೀಸಣಿಗೆ; ಬೀಸಣಿಗೆಯಂತೆ ಬಿಚ್ಚಿ ಹರಡಿದ ಯಾವುದೇ ವಸ್ತು: fan tracery ಬೀಸಣಿಗೆ ಜಾಲರ.
  3. ಹ್ಯಾನು; ಪಂಖ; ತಿರುಗುಬೀಸಣಿಗೆ; ಕೊಠಡಿ ಮೊದಲಾದವುಗಳಲ್ಲಿ ಗಾಳಿ ಚೆನ್ನಾಗಿ ಆಡುವಂತೆ ಗಾಳಿಯ ಪ್ರವಾಹವನ್ನುಂಟುಮಾಡುವ ತಿರುಗು ಸಲಕರಣೆ: table fan ಮೇಜು ಪಂಖ.
  4. (ಧಾನ್ಯವನ್ನು) ತೂರುವ ಯಂತ್ರ.
  5. (ನೌಕಾಯಾನ) ತಿರುಪುನೋದಕದ, ತಿರುಪು ಪ್ರೊಪೆಲರಿನ – ಅಲಗು.
  6. (ನೌಕಾಯಾನ) ನೋದಕ; ಪ್ರೊಪೆಲರು.
  7. ಪಂಖಹಾಯಿ; ಗಾಳಿಗಿರಣಿಯಲ್ಲಿ ಗಾಳಿಯ ದಿಕ್ಕಿಗೆ ದೊಡ್ಡ ಹಾಯಿಯನ್ನು ಒಡ್ಡುವಂತೆ ಅಳವಡಿಸಿರುವ ಸಣ್ಣಹಾಯಿ.
  8. ಬೀಸಣಿಗೆ ಮೆಕ್ಕಲು; ಮುಖ್ಯವಾಗಿ ನದಿ ಇಳಿಜಾರಿನಲ್ಲಿ ನಿಧಾನವಾಗಿ ಇಳಿಯುವಾಗ ಆಗುವ ಬೀಸಣಿಗೆಯಾಕಾರದ ನೆರೆಮಣ್ಣು ಯಾ ಮೆಕ್ಕಲು ಮಣ್ಣು.