See also 2false
1false ಹಾಲ್ಸ್‍
ಗುಣವಾಚಕ
  1. ತಪ್ಪಾದ; ಸರಿಯಿಲ್ಲದ; ಅಬದ್ಧ; ದೋಷಪೂರಿತ: false idea ತಪ್ಪು ಭಾವನೆ. false verdict ತಪ್ಪು ತೀರ್ಪು. false weights ತಪ್ಪು ತೂಕದ ಬಟ್ಟುಗಳು.
  2. ಸುಳ್ಳು; ಸುಳ್ಳಾದ; ಹುಸಿಯಾದ; ಸುಳ್ಳು ಹೇಳುವ; ಹುಸಿಯಾಡುವ; ಅಸತ್ಯವಾದ; ಅನೃತವಾದ: false witness ಸುಳ್ಳು ಸಾಕ್ಷಿ.
  3. ಮೋಸದ; ಮೋಸಗೊಳಿಸುವ; ವಂಚಿಸುವ.
  4. ನಿಷ್ಠೆಯಿಲ್ಲದ; ದ್ರೋಹಮಾಡುವ; ದ್ರೋಹಿಯಾದ; ನಂಬಿಕೆದ್ರೋಹಿಯಾದ; ನಂಬಿಕೆಗೆ ದ್ರೋಹವೆಸಗುವ; ವಿಶ್ವಾಸಘಾತುಕ; ವಿಶ್ವಾಸದ್ರೋಹ ಮಾಡುವ: false friend ವಿಶ್ವಾಸಘಾತುಕ ಸ್ನೇಹಿತ.
  5. ಭ್ರಾಂತಿಗೊಳಿಸುವ; ಭ್ರಾಂತಿಕಾರಕ; ಭ್ರಾಮಕ; ಭ್ರಮಾಜನಕ: false mirror ಹುಸಿಗನ್ನಡಿ; ಭ್ರಾಂತಿಗೊಳಿಸುವ ಕನ್ನಡಿ; ತಪ್ಪು ಪ್ರತಿಬಿಂಬ ನೀಡುವ ಕನ್ನಡಿ.
  6. ಕೃತಕ; ಖೋಟಾ; ನಕಲಿ: false coin ಖೋಟಾ ನಾಣ್ಯ. false teeth ಕೃತಕ ದಂತಪಂಕ್ತಿ; ನಕಲಿ ಹಲ್ಲುಗಳು; ಕಟ್ಟಿಸಿದ ಹಲ್ಲು ಸಾಲು. false hair ಕೃತಕ ಕೂದಲು
  7. ಠಕ್ಕಿನ; ಕಪಟದ; ಕೃತ್ರಿಮದ; ಬನಾವಟಿನ.
  8. ಹುಸಿ; ಕಳ್ಳ; ಸುಳ್ಳು; ಮಿಥ್ಯಾ; ನಿಜವಾಗಿರದ; ಹೊರನೋಟಕ್ಕೆ ಯಾವುದೋ ಒಂದರಂತೆ ಕಾಣುವ: false door ಹುಸಿಕದ. false god ಮಿಥ್ಯಾದೇವತೆ. false prophet ಸುಳ್ಳು ಪ್ರವಾದಿ.
  9. ಹುಸಿ; ಸುಳ್ಳು; ಮಿಥ್ಯಾ; ಕಳ್ಳ; ತಪ್ಪು ಹೆಸರಿನ; ಮಿಥ್ಯಾನಾಮದ; ತಪ್ಪುತಪ್ಪಾಗಿ ಅಂತೆ ಕರೆದಿರುವ: false acacia ಹುಸಿ ಜಾಲಿಮರ.
  10. ಅಕ್ರಮ; ಕಾನೂನುಬಾಹಿರ; ಕಾನೂನುಬದ್ಧವಲ್ಲದ: false imprisonment ಅಕ್ರಮ ಬಂಧನ; ಕಾಯಿದೆ ಬಾಹಿರ ಸೆರೆ.
ಪದಗುಚ್ಛ

false coin.

ನುಡಿಗಟ್ಟು

be false to one’s word ಮಾತಿಗೆ ತಪ್ಪು; ವಚನಭಂಗ ಮಾಡು; ಆಡಿದ ಯಾ ಕೊಟ್ಟ ಮಾತು ನಡೆಸದೆ ಹೋಗು.

See also 1false
2false ಹಾಲ್ಸ್‍
ಕ್ರಿಯಾವಿಶೇಷಣ

ಮೋಸದಿಂದ; ದ್ರೋಹದಿಂದ; ವಿಶ್ವಾಸಘಾತುಕತನದಿಂದ.

ನುಡಿಗಟ್ಟು

play person false

  1. ಒಬ್ಬನಿಗೆ ಮೋಸ ಮಾಡು; ಒಬ್ಬನನ್ನು ವಂಚಿಸು.
  2. ಒಬ್ಬನಿಗೆ ದ್ರೋಹ ಮಾಡು; ವಿಶ್ವಾಸಘಾತಮಾಡು.