See also 2fake  3fake  4fake  5fake
1fake ಹೇಕ್‍
ಸಕರ್ಮಕ ಕ್ರಿಯಾಪದ

(ನೌಕಾಯಾನ)(ಹಗ್ಗವನ್ನು) ಸುತ್ತು; ಸುರುಳಿಮಾಡು; ಸಿಂಬಿಮಾಡು.

See also 1fake  3fake  4fake  5fake
2fake ಹೇಕ್‍
ನಾಮವಾಚಕ

(ನೌಕಾಯಾನ) (ಹಗ್ಗದ) ಸುರುಳಿಯ ಒಂದು – ಸುತ್ತು, ಸಿಂಬಿ, ಸುರುಳಿ.

See also 1fake  2fake  4fake  5fake
3fake ಹೇಕ್‍
ಸಕರ್ಮಕ ಕ್ರಿಯಾಪದ
  1. ಸರಿಪಡಿಸು; ಆಕಾರಕ್ಕೆ ತರು; ಸರಿಯಾಗಿರುವಂತೆ ಮಾಡು; ದೋಷಗಳು ಕಾಣದಂತೆ ಮಾಡು; ಹೊರನೋಟಕ್ಕೆ ಸರಿಯಾಗಿರುವಂತೆ ಯಾ ಸಂಭಾವ್ಯವಾಗಿರುವಂತೆ ಮಾಡು. a horse faked up for sale ಮಾರಾಟಕ್ಕೆ ಸರಿಪಡಿಸಿದ ಕುದುರೆ.
  2. ಬಣ್ಣಕಟ್ಟು; ಗಿಲೀಟು ಮಾಡು; ಥಳುಕುಮಾಡು; ಚೆನ್ನಾಗಿ ತೋರುವಂತೆ ಮಾಡು; ಹೊರನೋಟಕ್ಕೆ ಅಂದಮಾಡು: fake a report ವರದಿಗೆ ಬಣ್ಣಕಟ್ಟು.
  3. ಕಳಪೆ ಸಾಮಗ್ರಿಯಿಂದ – ನಿರ್ಮಿಸು, ತಯಾರಿಸು.
  4. ನಟಿಸು; ನಟನೆ ಮಾಡು; ಸೋಗುಹಾಕು: fake illness ಕಾಯಿಲೆ ಬಂದಿದೆಯೆಂದು ನಟಿಸು.
  5. ಸೃಷ್ಟನೆ ಮಾಡು; ಕಲ್ಪಿಸು; ಕೃತಕವಾಗಿ ತಯಾರಿಸು; ಮೋಸಗೊಳಿಸುವ ಉದ್ದೇಶದಿಂದ ಬದಲಾಯಿಸು.
See also 1fake  2fake  3fake  5fake
4fake ಹೇಕ್‍
ನಾಮವಾಚಕ
  1. ಠಕ್ಕು; ಮೋಸ; ಹೂಟ; ಕುಯುಕ್ತಿ; ತಂತ್ರ; ಕಪಟ.
  2. ನಟನೆ; ಸೋಗು.
  3. ಸರಿಪಡಿಸಿದ, ತೇಪೆ ಹಾಕಿದ – ವಸ್ತು; ಹೊರನೋಟಕ್ಕೆ ಅಂದಮಾಡಿದ ವಸ್ತು.
  4. ಖೋಟಾ; ಸೃಷ್ಟನೆ; ಕೃತಕ ವಸ್ತು; ಸೃಷ್ಟನೆ ಮಾಡಿದ್ದು; ಮೋಸಗೊಳಿಸಲು ತಯಾರಿಸಿದ್ದು (ಮುಖ್ಯವಾಗಿ ಹುಸಿ ಪ್ರಾಚೀನ ಅವಶೇಷ).
  5. ಸುಳ್ಳು ವರದಿ; ಸೃಷ್ಟನೆ ಮಾಡಿದ ವರದಿ.
  6. ಠಕ್ಕ; ಮೋಸಗಾರ; ಸೋಗುಗಾರ.
See also 1fake  2fake  3fake  4fake
5fake ಹೇಕ್‍
ಗುಣವಾಚಕ

ಖೋಟಾ; ಕೃತಕ; ಸೃಷ್ಟನೆ ಮಾಡಿದ; ಮೋಸದ; ಕೃತ್ರಿಮವಾದ.