See also 2fair  3fair  4fair  5fair
1fair ಹೇರ್‍
ನಾಮವಾಚಕ
  1. ಜಾತ್ರೆ; ಪರಿಷೆ; ಸಂತೆ; ಸನ್ನದು, ಕಾನೂನು ಯಾ ರೂಢಿ ಅನುಸರಿಸಿ ಗೊತ್ತಾದ ಸ್ಥಳ ಮತ್ತು ಕಾಲಗಳಲ್ಲಿ ವ್ಯಾಪಾರಕ್ಕಾಗಿ, ಅನೇಕ ವೇಳೆ ಪ್ರದರ್ಶನ, ವಿನೋದಗಳಿಂದ ಕೂಡಿ, ಆಗಾಗ ಸೇರುವ ನೆರವಿ.
  2. ಪ್ರದರ್ಶನ; ಮುಖ್ಯವಾಗಿ ವಿಶೇಷ ಉತ್ಪನ್ನಗಳನ್ನು ಏರ್ಪಡಿಸುವ ಪ್ರದರ್ಶನ.
  3. = funfair.
ನುಡಿಗಟ್ಟು

a day after the fair ಸಂತೆ ಮುಗಿದ ಮೇಲೆ; ಕಾಲ ಈರಿದ ಮೇಲೆ.

See also 1fair  3fair  4fair  5fair
2fair ಹೇರ್‍
ಗುಣವಾಚಕ
  1. ಚೆಲುವಾದ; ಅಂದವಾದ; ಚೆನ್ನಾದ; ಸೊಗಸಾದ; ಸುಂದರವಾದ; ರಮ್ಯ.
  2. ತೃಪ್ತಿಕರ: his work is only fair, certainly not distinguished ಅವನ ಕೆಲಸ ತೃಪ್ತಿಕರವಾಗಿದೆ ಅಷ್ಟೆ, ಖಂಡಿತ ಶ್ರೇಷ್ಠಮಟ್ಟದ್ದಲ್ಲ.
  3. ಸಮೃದ್ಧ; ಯಥೇಚ್ಛವಾದ; ಹೇರಳವಾದ; ಪುಷ್ಕಳ; ಸಾಕಷ್ಟು: a fair heritage ಹೇರಳವಾದ ಪಿತ್ರಾರ್ಜಿತ.
  4. ಹೊರಗೆ ಚೆನ್ನಾಗಿ ತೋರುವ; ಮೇಲೆ ನ್ಯಾಯವಾಗಿ ಕಾಣುವ; ಮೇಲ್ನೋಟಕ್ಕೆ ಸರಿಯಿರಬಹುದೆಂದು ತೋರುವ, ಒಪ್ಪುವಂತೆ ಕಾಣುವ: fair speeches ನ್ಯಾಯಸಮ್ಮತವಾಗಿ ತೋರುವ ಭಾಷಣಗಳು.
  5. ನಸು ಹೊಂಬಣ್ಣದ; ಕಪ್ಪಲ್ಲದ; ಗೌರ: a fair complexion ಗೌರವರ್ಣ.
  6. ಚೊಕ್ಕಟವಾದ; ಶುಭ್ರ; ಸ್ವಚ್ಛ; ನಿರ್ಮಲವಾದ: fair water ನಿರ್ಮಲವಾದ ನೀರು.
  7. ಚೊಕ್ಕ; ಸ್ಪಷ್ಟ; ತಪ್ಪಿಲ್ಲದ: fair copy ಚೊಕ್ಕ ಪ್ರತಿ; ತಪ್ಪಿಲ್ಲದ ಪ್ರತಿ.
  8. ಕಳಂಕವಿಲ್ಲದ; ನಿಷ್ಕಳಂಕ; ನಿರ್ದುಷ್ಟ; ಕುಂದಿಲ್ಲದ: fair fame ನಿಷ್ಕಳಂಕ ಯಶಸ್ಸು.
  9. ನ್ಯಾಯವಾದ; ಪಕ್ಷಪಾತವಿಲ್ಲದ; ನ್ಯಾಯಪರ; ನಿಷ್ಪಕ್ಷಪಾತವಾದ; ನ್ಯಾಯಸಮ್ಮತವಾದ; ಕ್ರಮಬದ್ಧವಾದ; ಯುಕ್ತವಾದ.
  10. (ವಸ್ತು, ಆರೋಗ್ಯ, ಮೊದಲಾದವುಗಳ ವಿಷಯದಲ್ಲಿ) ತಕ್ಕಮಟ್ಟಿನ; ಸಾಮಾನ್ಯ ಗುಣದ; ಸಾಧಾರಣಮಟ್ಟದ; ಇದ್ದ ಮಟ್ಟಿಗೆ ಚೆನ್ನಾಗಿರುವ; ಮಧ್ಯಮಗುಣದ.
  11. (ಹವೆಯ ವಿಷಯದಲ್ಲಿ) ಹಿತವಾದ; ಗಾಳಿಮಳೆಯಿಲ್ಲದ.
  12. (ಗಾಳಿಯ ವಿಷಯದಲ್ಲಿ) (ಹಡಗು, ವಿಮಾನ, ಮೊದಲಾದವುಗಳಿಗೆ) ಅನುಕೂಲವಾದ; ಸಾಧಕವಾದ.
  13. (ಭವಿಷ್ಯ ಮೊದಲಾದವುಗಳ ವಿಷಯದಲ್ಲಿ) ಭರವಸೆ ಕೊಡುವ; ಆಶಾದಾಯಕ.
  14. (ಮಾತು, ಕ್ರಮ, ವಿಧಾನಗಳ ವಿಷಯದಲ್ಲಿ) ನಯವಾದ; ಮೃದುವಾದ; ಘರ್ಷಣೆಗಳಿಲ್ಲದ.
  15. ತಡೆಯಿಲ್ಲದ; ಅಡಚಣೆಯಿಲ್ಲದ; ಸಲೀಸಾದ.
  16. (ಆಕಾಶದ ವಿಷಯದಲ್ಲಿ) ನಿರ್ಮಲ; ಮೋಡಗಳಿಲ್ಲದ.
  17. (ಬ್ರಿಟಿಷ್‍ ಪ್ರಯೋಗ, ಆಸ್ಟ್ರೇಲಿಯ, ನ್ಯೂಸಿಲಂಡ್‍) (ಅಶಿಷ್ಟ) ಪೂರ್ತಿ ಸಂಪೂರ್ಣವಾದ.
ನುಡಿಗಟ್ಟು
  1. a fair 1field and no favour.
  2. a fair treat (ಆಡುಮಾತು) ಸಂತೋಷಕೊಡುವ ಯಾ ಆಕರ್ಷಕವಾದ ವಸ್ತು, ವ್ಯಕ್ತಿ.
  3. all is fair in love and war ಪ್ರೇಮದಲ್ಲೂ ಯುದ್ಧದಲ್ಲೂ ಎಲ್ಲವೂ ನ್ಯಾಯವೇ, ಎಲ್ಲಾ ಸರಿಯಾದುದೇ.
  4. by fair means ಸರಿಯಾದ ರೀತಿಯಲ್ಲಿ; ನ್ಯಾಯವಾದ ರೀತಿಯಲ್ಲಿ; ಹಿಂಸೆ ಯಾ ಮೋಸಗಳಿಲ್ಲದೆ.
  5. by fair or foul means ಧರ್ಮವೋ ಅಧರ್ಮವೋ, ನ್ಯಾಯವೋ ಅನ್ಯಾಯವೋ – ಹೇಗಾದರೂ ಸರಿಯೆ.
  6. fair enough! (ಆಡುಮಾತು) ಒಪ್ಪಬಹುದಾದದ್ದು; ಸಮ್ಮತವಾಗುವಂಥದ್ದು; ಅದೊಂದು ನ್ಯಾಯ ಯಾ ತೃಪ್ತಿಕರ ಎನ್ನಬಹುದಾದ ಸೂಚನೆ, ಪ್ರಸ್ತಾಪ.
  7. fair to middling ಸುಮಾರಾಗಿರುವ; ಸ್ವಲ್ಪ ಮಧ್ಯಮ ಗುಣದ; ಸರಾಸರಿಗಿಂತ ತುಸು ಮೇಲುಮಟ್ಟದ; ಸಾಮಾನ್ಯ ಮಟ್ಟಕ್ಕಿಂತ ಸ್ವಲ್ಪ ಮೇಲ್ದರ್ಜೆಯ.
  8. in a fair way (to succeed) ಬಹುಮಟ್ಟಿಗೆ (ಗೆಲ್ಲಬಹುದಾದ); (ಗೆಲ್ಲುವ) ಸಾಧ್ಯತೆಯಿರುವ; (ಗೆಲ್ಲಲು) ಹೆಚ್ಚು ಅವಕಾಶವಿರುವ.
  9. the fair sex ಹೆಂಗಸರು; ಮಹಿಳೆಯರು; ಸ್ತ್ರೀಯರು; ಹೆಣ್ಣುಮಕ್ಕಳು.
See also 1fair  2fair  4fair  5fair
3fair ಹೇರ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಸುಂದರವಾದ ಹೆಂಗಸು.
  2. ಸುಂದರವಾದ, ಅಂದವಾದ ವಸ್ತು.
  3. ಹೆಣ್ಣುಮಗಳು; ಹೆಂಗಸು: a fair ಒಬ್ಬ ಹೆಂಗಸು.
  4. ಪ್ರಿಯೆ; ನಲ್ಲೆ.
ಪದಗುಚ್ಛ

the fair ಮಹಿಳೆಯರು; ಹೆಣ್ಣುಮಕ್ಕಳು.

ನುಡಿಗಟ್ಟು
  1. fair’s fair (ಆಡುಮಾತು) ನ್ಯಾಯ ಎಂದರೆ ನ್ಯಾಯ; (ಪರಸ್ಪರ) ನ್ಯಾಯದಿಂದಿರುವುದು ಲೇಸು.
  2. for fair (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಸಂಪೂರ್ಣವಾಗಿ; ಪೂರ್ತಿಯಾಗಿ.
See also 1fair  2fair  3fair  5fair
4fair ಹೇರ್‍
ಸಕರ್ಮಕ ಕ್ರಿಯಾಪದ
  1. (ದಸ್ತಾವೇಜಿನ) ಶುದ್ಧಪ್ರತಿ ಮಾಡು; ಚೊಕ್ಕಪ್ರತಿ ಮಾಡು; ಚೊಕ್ಕಪ್ರತಿ ತಯಾರು ಮಾಡು.
  2. (ನೌಕಾನಿರ್ಮಾಣ ಮೊದಲಾದವುಗಳಲ್ಲಿ ನೌಕೆಯ ಮೇಲ್ಮೈ ಮೊದಲಾದವನ್ನು) ನಯಗೊಳಿಸು; ಮಟ್ಟಸಮಾಡು.
ಅಕರ್ಮಕ ಕ್ರಿಯಾಪದ

(ಹವೆಯ ವಿಷಯದಲ್ಲಿ) ಹಿತವಾಗು; ಅನುಕೂಲವಾಗು.

See also 1fair  2fair  3fair  4fair
5fair ಹೇರ್‍
ಕ್ರಿಯಾವಿಶೇಷಣ
  1. ಚೆನ್ನಾಗಿ; ಅಂದವಾಗಿ; ಸೊಗಸಾಗಿ.
  2. ಪೂರ್ತಿಯಾಗಿ; ಸಂಪೂರ್ಣವಾಗಿ; ಪೂರ್ಣವಾಗಿ: it all happened so suddenly that it fair took my breath away ಅದೆಲ್ಲ ಎಷ್ಟು ಹಠಾತ್ತಾಗಿ ಆಗಿಹೋಯಿತೆಂದರೆ ನನ್ನ ಉಸಿರು ಕಟ್ಟಿಹೋಯಿತು, ಪೂರ್ತಿ ನಿಂತುಹೋಯಿತು.
  3. ಸರಿಯಾಗಿ; ನಿಖರವಾಗಿ; ಕರಾರುವಾಕ್ಕಾಗಿ; ಸಂಪೂರ್ಣವಾಗಿ.
ಪದಗುಚ್ಛ
  1. bid fair ಭರವಸೆ ಹುಟ್ಟಿಸು; ಆಶೆ ಮೂಡಿಸು; ಸಂಭಾವ್ಯವಾಗಿರು: bid fair to succeed ಗೆಲ್ಲುವ ಸಂಭವವಿರು; ಜಯಗಳಿಸುವಂತೆ ತೋರು.
  2. fair and softly (ಮುಖ್ಯವಾಗಿ ಸರಿಯೆಂದು ಭಾವಿಸಿಕೊಂಡು ಹೇಳುವ ಮಾತಿಗೆ ಆಕ್ಷೇಪಣೆಯಾಗಿ ಪ್ರತಿಹೇಳುವ ಮಾತಾಗಿ) ಮೆಲ್ಲಗೆ; ಮೃದುವಾಗಿ; ಅಷ್ಟು – ಅವಸರಪಡದೆ, ದುಡುಕದೆ, ಆತುರಪಡದೆ.
  3. fight fair ನ್ಯಾಯವಾಗಿ, ನಿಯಮಗಳಿಗನುಸಾರವಾಗಿ – ಹೋರಾಡು.
  4. speak one fair (ಒಬ್ಬ ವ್ಯಕ್ತಿಯನ್ನು) ನಯವಾಗಿ ಮಾತಾಡಿಸು; (ವ್ಯಕ್ತಿಯೊಡನೆ) ಮರ್ಯಾದೆಯಿಂದ ಮಾತಾಡು.
  5. strike fair ನೆಟ್ಟಗೆ ಹೊಡೆ; ಸರಿಯಾಗಿ ಹೊಡೆ; ನೇರವಾಗಿ ಹೊಡೆ.
  6. write out fair ಚೊಕ್ಕಪ್ರತಿ ಮಾಡು; ಶುದ್ಧಪ್ರತಿ ಬರೆ.