See also 1fair  2fair  3fair  4fair
5fair ಹೇರ್‍
ಕ್ರಿಯಾವಿಶೇಷಣ
  1. ಚೆನ್ನಾಗಿ; ಅಂದವಾಗಿ; ಸೊಗಸಾಗಿ.
  2. ಪೂರ್ತಿಯಾಗಿ; ಸಂಪೂರ್ಣವಾಗಿ; ಪೂರ್ಣವಾಗಿ: it all happened so suddenly that it fair took my breath away ಅದೆಲ್ಲ ಎಷ್ಟು ಹಠಾತ್ತಾಗಿ ಆಗಿಹೋಯಿತೆಂದರೆ ನನ್ನ ಉಸಿರು ಕಟ್ಟಿಹೋಯಿತು, ಪೂರ್ತಿ ನಿಂತುಹೋಯಿತು.
  3. ಸರಿಯಾಗಿ; ನಿಖರವಾಗಿ; ಕರಾರುವಾಕ್ಕಾಗಿ; ಸಂಪೂರ್ಣವಾಗಿ.
ಪದಗುಚ್ಛ
  1. bid fair ಭರವಸೆ ಹುಟ್ಟಿಸು; ಆಶೆ ಮೂಡಿಸು; ಸಂಭಾವ್ಯವಾಗಿರು: bid fair to succeed ಗೆಲ್ಲುವ ಸಂಭವವಿರು; ಜಯಗಳಿಸುವಂತೆ ತೋರು.
  2. fair and softly (ಮುಖ್ಯವಾಗಿ ಸರಿಯೆಂದು ಭಾವಿಸಿಕೊಂಡು ಹೇಳುವ ಮಾತಿಗೆ ಆಕ್ಷೇಪಣೆಯಾಗಿ ಪ್ರತಿಹೇಳುವ ಮಾತಾಗಿ) ಮೆಲ್ಲಗೆ; ಮೃದುವಾಗಿ; ಅಷ್ಟು – ಅವಸರಪಡದೆ, ದುಡುಕದೆ, ಆತುರಪಡದೆ.
  3. fight fair ನ್ಯಾಯವಾಗಿ, ನಿಯಮಗಳಿಗನುಸಾರವಾಗಿ – ಹೋರಾಡು.
  4. speak one fair (ಒಬ್ಬ ವ್ಯಕ್ತಿಯನ್ನು) ನಯವಾಗಿ ಮಾತಾಡಿಸು; (ವ್ಯಕ್ತಿಯೊಡನೆ) ಮರ್ಯಾದೆಯಿಂದ ಮಾತಾಡು.
  5. strike fair ನೆಟ್ಟಗೆ ಹೊಡೆ; ಸರಿಯಾಗಿ ಹೊಡೆ; ನೇರವಾಗಿ ಹೊಡೆ.
  6. write out fair ಚೊಕ್ಕಪ್ರತಿ ಮಾಡು; ಶುದ್ಧಪ್ರತಿ ಬರೆ.