See also 2failing
1failing ಹೇಲಿಂಗ್‍
ನಾಮವಾಚಕ
  1. ಅಭಾವ; ಅಭಾವವಾಗುವುದು.
  2. ಕೊರೆ; ಕೊರತೆ; ಸಾಕಾಗದಿರುವುದು; ಕಡಮೆ ಬೀಳುವುದು.
  3. (ಮಾಡಲು) ತಪ್ಪುವುದು; ಉದಾಸೀನದಿಂದಲೋ, ಮರೆವಿನಿಂದಲೋ, ಮನಸ್ಸಿಲ್ಲದಿರುವುದರಿಂದಲೋ ಮಾಡದಿರುವುದು.
  4. ನಾಶವಾಗಿ ಹೋಗುವುದು; ಅಳಿದುಹೋಗುವುದು; ನಷ್ಟವಾಗಿ ಹೋಗುವುದು.
  5. ಕುಗ್ಗುವುದು; ಕುಸಿಯುವುದು; ಭಗ್ನವಾಗುವುದು.
  6. ಬಲಗುಂದುವುದು; ಸಾಮರ್ಥ್ಯಗುಂದುವುದು.
  7. ಎಣಿಸಿದಂತಾಗದಿರುವುದು; ಆಶಾಭಂಗ.
  8. ಸಾಕಷ್ಟು ಸನ್ನದ್ಧವಾಗಿಲ್ಲದಿರುವುದು.
  9. ಪಡೆಯಲು ವಿಫಲವಾಗುವುದು; ಅಯಶಸ್ವಿಯಾಗುವುದು; ಸೋಲುವುದು.
  10. ಹೇಲು; ನಪಾಸು; ತೇರ್ಗಡೆಯಾಗದಿರುವುದು.
  11. ಮಾಡಲಾರದೆ ಹೋಗುವುದು; ಮಾಡುವುದರಲ್ಲಿ ಜಯಶೀಲನಾಗದಿರುವುದು.
  12. ಗುರಿತಪ್ಪುವುದು; ವ್ಯರ್ಥವಾಗುವುದು; ನಿಷ್ಫಲವಾಗುವುದು.
  13. (ಹಣ ಸಲ್ಲಿಸುವುದನ್ನು) ತಪ್ಪಿಸುವುದು; ನಿಲ್ಲಿಸುವುದು; ಪಾವತಿಮಾಡದಿರುವುದು.
  14. ದಿವಾಳಿಯಾಗುವುದು; ಪಾಪರ್‍ ಆಗುವುದು.
  15. ಅಭ್ಯರ್ಥಿಯಾಗಿ ಆಯ್ಕೆಯಾಗದಿರುವುದು ಯಾ ಆಯ್ಕೆಮಾಡದಿರುವುದು.
  16. (ಸ್ವಭಾವದಲ್ಲಿನ) ದೋಷ; ಕುಂದು; ಕೊರತೆ; ನ್ಯೂನತೆ; ದೌರ್ಬಲ್ಯ.
See also 1failing
2failing ಹೇಲಿಂಗ್‍
ಉಪಸರ್ಗ

ಆಗದಿದ್ದರೆ; ಇಲ್ಲದಿದ್ದರೆ; ಮಾಡದೆ ಹೋದರೆ; ತಪ್ಪಿದಲ್ಲಿ: failing this ಇದು ಆಗದಿದ್ದರೆ; ಇದು ತಪ್ಪಿದರೆ. failing an answer ಉತ್ತರ ಬಾರದಿದ್ದಲ್ಲಿ.

ಪದಗುಚ್ಛ

whom failing or failing whom ಇಲ್ಲದಿದ್ದರೆ; ಅವನ ಗೈರುಹಾಜರಿಯಲ್ಲಿ.