See also 2faggot
1faggot ಹ್ಯಾಗಟ್‍
ನಾಮವಾಚಕ
  1. ಸೌದೆಯ – ಕಂತೆ, ಹೊರೆ, ಪಿಂಡಿ, ಕಟ್ಟು.
  2. (ಬೆಸುಗೆ ಹಾಕುವ) ಸರಳುಕಟ್ಟು; ಉಕ್ಕಿನ ಸರಳುಗಳ ಕಟ್ಟು, ಕಂತೆ.
  3. (ಸಾಮಾನ್ಯವಾಗಿ ಬಹುವಚನದಲ್ಲಿ) (ಪ್ರಾಣಿಯ) ಯಕೃತ್ತು ಮೊದಲಾದವನ್ನು ತುಂಡು ತುಂಡುಮಾಡಿ, ಸಂಬಾರ ಬೆರೆಸಿ, ಉಂಡೆ ಯಾ ಸುರುಳಿ ಮಾಡಿ ಬೇಯಿಸಿದ ತಿನಿಸು.
  4. ಅಪ್ರಿಯ ಯಾ ಇಷ್ಟವಾಗದ ಹೆಂಗಸು.
  5. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಸಲಿಂಗಕಾಮಿ (ಸಾಮಾನ್ಯವಾಗಿ ಗಂಡಸು).
See also 1faggot
2faggot ಹ್ಯಾಗಟ್‍
ಸಕರ್ಮಕ ಕ್ರಿಯಾಪದ
  1. (ಸೌದೆ ಸೀಳುಗಳನ್ನು) ಕಂತೆಕಟ್ಟು; ಹೊರೆಮಾಡು.
  2. (ಉಕ್ಕಿನ ಸಲಾಕಿಗಳನ್ನು) ಕಂತೆಯಾಗಿ ಕಟ್ಟು; ಹೊರೆಯಾಗಿ ಕಟ್ಟು.
  3. ಸರಳುಕಟ್ಟು ಅಲಂಕರಣ ಮಾಡು.
  4. ಸರಳುಕಟ್ಟು ಕಸೂತಿಯಿಂದ – ಸೇರಿಸು, ಕೂಡಿಸು.
ಅಕರ್ಮಕ ಕ್ರಿಯಾಪದ
  1. ಕಂತೆಕಟ್ಟು; ಹೊರೆ ಮಾಡು; ಕಂತೆಯಾಗಿ ಸೇರಿಸು.
  2. ಸರಳುಕಟ್ಟು ಕಸೂತಿ ಯಾ ಹೆಣಿಗೆ ಹಾಕು.