See also 2factor
1factor ಹ್ಯಾಕ್ಟರ್‍
ನಾಮವಾಚಕ
  1. ಏಜೆಂಟು; ಪ್ರತಿನಿಧಿ; ನಿಯೋಗಿ; ಕಾರ್ಯಭಾರಿ; ಇನ್ನೊಬ್ಬರ ಕಾರ್ಯ ಮಾಡುವವನು.
  2. ದಳ್ಳಾಳಿ; ದಳ್ಳಾಳಿ ವರ್ತಕ ಯಾ ವ್ಯಾಪಾರಿ; ರುಸುಮಿಗಾಗಿ ಕೊಳ್ಳುವ ಹಾಗೂ ಮಾರುವ ವ್ಯಾಪಾರಿ.
  3. (ಸ್ಕಾಟ್‍ಲಂಡಿನಲ್ಲಿ) ಜಈನಿನ ವ್ಯವಸ್ಥಾಪಕ; ಆಸ್ತಿಪಾಸ್ತಿಯ ಮೇಲ್ವಿಚಾರಕ.
  4. (ಗಣಿತ) ಅಪವರ್ತನ; ಯಾವುದೇ ಸಂಖ್ಯೆ ಯಾ ಬೀಜಗಣಿತೋಕ್ತಿಯನ್ನು ಒಂದು ಗುಣಲಬ್ಧವಾಗಿ ನಿರೂಪಿಸಿದಾಗ ಕಂಡುಬರುವ ಅದರ ಅಂಗಭಾಗಗಳಲ್ಲೊಂದು.
  5. (ಜೀವವಿಜ್ಞಾನ) ಅಂಶ; ಆನುವಂಶಿಕ ಲಕ್ಷಣಗಳ ಸಮಗ್ರತೆಯನ್ನು ನಿರ್ಧರಿಸುವ ಬಿಡಿ ಅಂಶಗಳಲ್ಲೊಂದು.
  6. (ಒಂದು ಫಲಿತಾಂಶಕ್ಕೆ ಕಾರಣವಾದ) ಸಂದರ್ಭ; ಪರಿಸ್ಥಿತಿ; ವಾಸ್ತವಾಂಶ; ಪ್ರಭಾವ; ಅಂಶ; ವಿಷಯ; ಸಂಗತಿ.
ಪದಗುಚ್ಛ

factor of safety ಸುರಕ್ಷಣಾಂಶ:

  1. (ಶಿಲ್ಪಶಾಸ್ತ್ರ) ಸುರಕ್ಷಣಾ ಪ್ರಮಾಣ; ಯಾವುದೇ ಪದಾರ್ಥದ ದಾರ್ಢ್ಯಕ್ಕೂ ಅದು ಸಹಿಸಬೇಕಾಗುವ ಭಾರಕ್ಕೂ ಇರುವ ದಾಮಾಷಾ.
  2. (ರೂಪಕವಾಗಿ) (ಅಪಾಯಗಳನ್ನು ಎದುರಿಸಲು ಇರುವ) ಸುರಕ್ಷಣಾ ವ್ಯವಸ್ಥೆ; ಸುಭದ್ರತಾಂಶ.
See also 1factor
2factor ಹ್ಯಾಕ್ಟರ್‍
ಸಕರ್ಮಕ ಕ್ರಿಯಾಪದ
  1. ಅಂಶಗಳಾಗಿ ಒಡೆ; ಭಾಗಗಳಾಗಿ ವಿಘಟಿಸು; ಘಟಕಗಳಾಗಿ ವಿಭಜಿಸು.
  2. (ಗಣಿತ) ಗುಣಕಗಳಾಗಿ ಒಡೆ.
ಅಕರ್ಮಕ ಕ್ರಿಯಾಪದ

ಸಾಲ ಕೊಂಡುಕೊ; ಸಾಲ ವಹಿಸಿಕೊ; ವಸೂಲಿ ಮಾಡಿ ಲಾಭಗಳಿಸಿಕೊಳ್ಳಲು ಇನ್ನೊಬ್ಬನ ಸಾಲಗಳನ್ನು ರಿಯಾಯಿತಿಯಲ್ಲಿ ಕೊಂಡುಕೊ.