See also 2extreme
1extreme ಇ(ಎ)ಕ್ಸ್‍ಟ್ರೀಮ್‍
ಗುಣವಾಚಕ
  1. ಅತ್ಯಂತ ಹೊರಗಿನ; ಕೇಂದ್ರದಿಂದ ಅತ್ಯಂತ ದೂರದ.
  2. ಕಟ್ಟಕಡೆಯ; ಕೊಟ್ಟಕೊನೆಯ; ತುತ್ತತುದಿಯ.
  3. ಅತ್ಯಂತ; ಬಹಳ ಹೆಚ್ಚಿನ: extreme joy ಅತ್ಯಂತ ಹರ್ಷ.
  4. ಅಂತಿಮ; ಕೊನೆಯ: extreme unction (ರೋಮನ್‍ ಕ್ಯಾಥೊಲಿಕ್‍ ಯಾ ಗ್ರೀಕ್‍ ಚರ್ಚಿನ ವಿಧಿಯಂತೆ) ಅಂತಿಮ ಅಭ್ಯಂಜನ; ಸಾಯುತ್ತಿರುವವನಿಗೆ ಪಾದ್ರಿಯು ಪವಿತ್ರ ತೈಲ ಲೇಪಿಸುವುದು.
  5. ಪರಮಾವಧಿಯ; ಪರಾಕಾಷ್ಠೆಯ; ಅತ್ಯಂತ; ಅತಿಯಾದ; ವಿಪರೀತ: in extreme danger ವಿಪರೀತ ಅಪಾಯದಲ್ಲಿ.
  6. (ಕೆಲಸ, ವಿಧಿ, ಕ್ರಮಗಳು, ಮೊದಲಾದವುಗಳ ವಿಷಯದಲ್ಲಿ) ಕಠಿನ; ಉಗ್ರ: we did not know she would take such extreme action ಅವಳು ಇಷ್ಟೊಂದು ಉಗ್ರಕ್ರಮ ಕೈಗೊಳ್ಳುವಳೆಂದು ನಮಗೆ ತಿಳಿಯಲಿಲ್ಲ.
  7. (ಅಭಿಪ್ರಾಯಗಳು, ವ್ಯಕ್ತಿಗಳು, ಮೊದಲಾದವರ ವಿಷಯದಲ್ಲಿ) ಉಗ್ರ; ಕಟ್ಟಾ; ತೀವ್ರ: an extreme socialist ಉಗ್ರ ಸಮಾಜವಾದಿ.
  8. (ಅಭಿಪ್ರಾಯ, ವ್ಯಕ್ತಿ, ಮೊದಲಾದವರ ವಿಷಯದಲ್ಲಿ) ಅತಿರೇಕದ; ವಿಪರೀತವಾದ; ಅತಿಯಾದ; ಹಾಳತವಾಗಿರದ.
  9. (ಯಾವುದೇ ವಸ್ತುವಿನ ಯಾವುದೇ) ತುದಿಯಲ್ಲಿರುವ; ಕೊನೆಯಲ್ಲಿರುವ.
ಪದಗುಚ್ಛ
  1. an extreme case ಉತ್ಕಟ ಸ್ಥಿತಿ; ಯಾವುದಾದರೂ ಒಂದು ಗುಣ ಯಾ ಅಂಶ ಉತ್ಕಟ ಮಟ್ಟಕ್ಕೆ ಹೋಗಿರುವ ಸ್ಥಿತಿ.
  2. divided in extreme and mean ratio ಸುವರ್ಣ ಮಧ್ಯ ಬರುವಂತೆ ವಿಭಾಗಿಸಿ; ಯಾವುದೇ ಒಂದರ ಚಿಕ್ಕ ಭಾಗಕ್ಕೂ ದೊಡ್ಡ ಭಾಗಕ್ಕೂ ಯಾವ ಪ್ರಮಾಣವಿರುವುದೋ ಅದೇ ಪ್ರಮಾಣ ದೊಡ್ಡ ಭಾಗಕ್ಕೂ ಅವೆರಡರ ಮೊತ್ತಕ್ಕೂ ಇರುವಂತೆ ವಿಭಾಗಿಸಿ.
See also 1extreme
2extreme ಇ(ಎ)ಕ್ಸ್‍ಟ್ರೀಮ್‍
ನಾಮವಾಚಕ
  1. ಕೊನೆ; ತುದಿ; ಕಡೆ; ಯಾವುದೇ ವಸ್ತುವಿನ ಯಾವುದೇ ತುದಿಯಲ್ಲಿರುವುದು.
  2. (ಸಾಮಾನ್ಯವಾಗಿ ಬಹುವಚನದಲ್ಲಿ) ಅತಿ ವಿರುದ್ಧಗಳು; ಅತ್ಯಂತ ದೂರವಾಗಿಯೋ, ವಿರುದ್ಧ ಸ್ವಭಾವದವಾಗಿಯೋ ಇರುವುದು: extremes meet ತೀರ ವಿರುದ್ಧವಾದವು (ಒಮ್ಮೊಮ್ಮೆ) ಒಂದಾಗುವುವು, ಸೇರುವುವು.
  3. (ತರ್ಕಶಾಸ್ತ್ರ) ಅಂತ್ಯ ಪದ:
    1. ಪ್ರತಿಜ್ಞೆಯ ಕರ್ತೃ ಯಾ ಪ್ರತಿಜ್ಞಾತ ಪದ.
    2. ಸಿಲಾಜಿಸಮ್ಮಿನ ಕರ್ತೃಪದ ಯಾ ಪ್ರತಿಜ್ಞಾತ ಪದ.
  4. (ಗಣಿತ) (ಶ್ರೇಣಿಯ ಯಾ ಅನುಪಾತದ) ಅಂತ್ಯ ಪದ; ಮೊದಲನೆಯ ಯಾ ಕೊನೆಯ ಪದ.
ನುಡಿಗಟ್ಟು
  1. go to extremes ಅತಿ ಮಾಡು; ಅತಿಯಾಗಿ ಹೋಗು; ವಿಪರೀತಕ್ಕೆ ಹೋಗು.
  2. go to the other extreme ತದ್ವಿರುದ್ಧವಾದ ದಾರಿ ಹಿಡಿ; ವಿರುದ್ಧವಾದ ಮಾರ್ಗ ಹಿಡಿ; ಇನ್ನೊಂದು ಕೊನೆಗೆ ಹೋಗು.
  3. in the extreme ವಿಪರೀತವಾಗಿ; ತೀವ್ರವಾದ ಮಟ್ಟಕ್ಕೆ.
  4. run to an extreme = ನುಡಿಗಟ್ಟು \((1)\).