See also 1extreme
2extreme ಇ(ಎ)ಕ್ಸ್‍ಟ್ರೀಮ್‍
ನಾಮವಾಚಕ
  1. ಕೊನೆ; ತುದಿ; ಕಡೆ; ಯಾವುದೇ ವಸ್ತುವಿನ ಯಾವುದೇ ತುದಿಯಲ್ಲಿರುವುದು.
  2. (ಸಾಮಾನ್ಯವಾಗಿ ಬಹುವಚನದಲ್ಲಿ) ಅತಿ ವಿರುದ್ಧಗಳು; ಅತ್ಯಂತ ದೂರವಾಗಿಯೋ, ವಿರುದ್ಧ ಸ್ವಭಾವದವಾಗಿಯೋ ಇರುವುದು: extremes meet ತೀರ ವಿರುದ್ಧವಾದವು (ಒಮ್ಮೊಮ್ಮೆ) ಒಂದಾಗುವುವು, ಸೇರುವುವು.
  3. (ತರ್ಕಶಾಸ್ತ್ರ) ಅಂತ್ಯ ಪದ:
    1. ಪ್ರತಿಜ್ಞೆಯ ಕರ್ತೃ ಯಾ ಪ್ರತಿಜ್ಞಾತ ಪದ.
    2. ಸಿಲಾಜಿಸಮ್ಮಿನ ಕರ್ತೃಪದ ಯಾ ಪ್ರತಿಜ್ಞಾತ ಪದ.
  4. (ಗಣಿತ) (ಶ್ರೇಣಿಯ ಯಾ ಅನುಪಾತದ) ಅಂತ್ಯ ಪದ; ಮೊದಲನೆಯ ಯಾ ಕೊನೆಯ ಪದ.
ನುಡಿಗಟ್ಟು
  1. go to extremes ಅತಿ ಮಾಡು; ಅತಿಯಾಗಿ ಹೋಗು; ವಿಪರೀತಕ್ಕೆ ಹೋಗು.
  2. go to the other extreme ತದ್ವಿರುದ್ಧವಾದ ದಾರಿ ಹಿಡಿ; ವಿರುದ್ಧವಾದ ಮಾರ್ಗ ಹಿಡಿ; ಇನ್ನೊಂದು ಕೊನೆಗೆ ಹೋಗು.
  3. in the extreme ವಿಪರೀತವಾಗಿ; ತೀವ್ರವಾದ ಮಟ್ಟಕ್ಕೆ.
  4. run to an extreme = ನುಡಿಗಟ್ಟು \((1)\).