1express ಇ(ಎ)ಕ್ಸ್‍ಪ್ರೆಸ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) (ಹೋಲಿಕೆಯಲ್ಲಿ) ಕರಾರುವಾಕ್ಕಾದ; ಯಥಾವತ್ತಾದ; ನಿಷ್ಕೃಷ್ಟವಾದ: he is the express imgae of his father ಅವನು ಅವನ ತಂದೆಯ ಯಥಾವತ್ತಾದ ಪ್ರತಿರೂಪ.
  2. ಸ್ಪಷ್ಟ; ಸುವ್ಯಕ್ತ; ಸ್ಪಷ್ಟವಾಗಿ ಹೇಳಿದ; ಸರಿಯಾಗಿ ವ್ಯಕ್ತಪಡಿಸಿದ; ಬಾಯಿಬಿಟ್ಟು ಹೇಳಿದ: he cannot ignore such an express command ಅಷ್ಟು ಸ್ಪಷ್ಟವಾಗಿ ಕೊಟ್ಟ ಆಜ್ಞೆಯನ್ನು ಅವನು ಕಡೆಗಣಿಸಲಾರ.
  3. ಪ್ರತ್ಯೇಕ; ವಿಶೇಷ; ನಿರ್ದಿಷ್ಟ ಉದ್ದೇಶದಿಂದ ಮಾಡಿದ, ಕಳುಹಿಸಲ್ಪಟ್ಟ: we have an express purpose in being here ನಾವು ಇಲ್ಲಿರುವುದರಲ್ಲಿ ವಿಶೇಷ ಉದ್ದೇಶವಿದೆ.
  4. (ಸಂದೇಶಗಳ ಯಾ ಸರಕಿನ ವಿಷಯದಲ್ಲಿ) ವಿಶಿಷ್ಟ; ವಿಶೇಷ ದೂತನ ಮೂಲಕ ಯಾ ವಿಶೇಷ ವ್ಯವಸ್ಥೆಯ ಮೂಲಕ ಕಳುಹಿಸಿದ.
  5. ವೇಗದ; ಶೀಘ್ರಗತಿಯ.
2express ಇ(ಎ)ಕ್ಸ್‍ಪ್ರೆಸ್‍
ಕ್ರಿಯಾವಿಶೇಷಣ
  1. ವೇಗದಿಂದ; ವೇಗವಾಗಿ.
  2. ವಿಶೇಷ ದೂತನ ಮೂಲಕ ಯಾ ವೇಗದ ರೈಲುಮೂಲಕ.
3express ಇ(ಎ)ಕ್ಸ್‍ಪ್ರೆಸ್‍
ನಾಮವಾಚಕ
  1. ಎಕ್ಸ್‍ಪ್ರೆಸ್‍ ರೈಲು; ವೇಗದ ರೈಲುಬಂಡಿ.
  2. ತುರುತಿನ ಚಾರ; ವೇಗವಾಗಿ ಹೋಗುವ ದೂತ.
  3. = express rifle.
  4. (ಅಮೆರಿಕನ್‍ ಪ್ರಯೋಗ) ಸಾಗಣೆಸಂಸ್ಥೆ; ಭಾಂಗಿಗಳು ಮೊದಲಾದವನ್ನು ಸಾಗಿಸುವ ಸಂಸ್ಥೆ.
  5. ವೃತ್ತಪತ್ರಿಕೆ (Daily Express, Indian Express, ಮೊದಲಾದ ಪತ್ರಿಕೆಗಳ ಹೆಸರುಗಳಲ್ಲಿ ಬಳಕೆ).
4express ಇ(ಎ)ಕ್ಸ್‍ಪ್ರೆಸ್‍
ಸಕರ್ಮಕ ಕ್ರಿಯಾಪದ
  1. (ರಸವನ್ನು, ಗಾಳಿಯನ್ನು, ಮೊಲೆಯಿಂದ ಹಾಲನ್ನು) ಹಿಂಡಿತೆಗೆ; ಹಿಸುಕಿ ತೆಗೆ; ಹಿದುಕು: juice expressed from grapes ದ್ರಾಕ್ಷಿಯಿಂದ ಹಿಂಡಿ ತೆಗೆದ ರಸ.
  2. ಹೊರಸೂಸು; ಹೊರಬಿಡು; ಹೊರಸುರಿಸು; ಚೆಲ್ಲು; ಒಸರು; ಸ್ರವಿಸು: the roses expressed a sweet perfume ಗುಲಾಬಿಹೂಗಳು ಸುವಾಸನೆಯನ್ನು ಹೊರಸೂಸಿದವು.
  3. (ಗಣಿತ) ನಿರೂಪಿಸು; ಯಾವುದೇ ಪರಿಮಾಣವನ್ನು ಗೊತ್ತಾದ ಇನ್ನೊಂದು ಪರಿಮಾಣದಲ್ಲಿ ವ್ಯಕ್ತಪಡಿಸು: express three feet in terms of inches ಮೂರು ಅಡಿಗಳನ್ನು ಅಂಗುಲಗಳಲ್ಲಿ ನಿರೂಪಿಸು.
  4. (ಭಾವನೆಗಳನ್ನು, ಗುಣಗಳನ್ನು) ಹೊರಗೆಡವು; ಪ್ರಕಟಪಡಿಸು; ಅಭಿವ್ಯಕ್ತಗೊಳಿಸು; ವ್ಯಕ್ತಪಡಿಸು; ತೋರಿಸು; ಕಾಣಿಸು; ಪ್ರಕಟಿಸು; ಸೂಚಿಸು: expressed his satisfaction ಅವನು ತೃಪ್ತಿಯನ್ನು ವ್ಯಕ್ತಪಡಿಸಿದ.
  5. (ಯೋಚಿಸಿದ್ದನ್ನು) ನುಡಿ; ಹೇಳು; ಮಾತಿನಲ್ಲಿ ತಿಳಿಯ ಪಡಿಸು: I cannot easily express to you how grateful I am to you ನಾನು ನಿನಗೆ ಎಷ್ಟು ಋಣಿಯಾಗಿದ್ದೇನೆಂಬುದನ್ನು ಸುಲಭದಲ್ಲಿ ಹೇಳಲಾರೆ.
ಪದಗುಚ್ಛ

express oneself ಮನಸ್ಸಿನಲ್ಲಿರುವುದನ್ನು ತಿಳಿಸು, ಹೇಳು, ವ್ಯಕ್ತಪಡಿಸು: he is still unable to express himself in English ಅವನಿಗೆ ತನ್ನ ಭಾವನೆಗಳನ್ನು ಇಂಗ್ಲಿಷಿನಲ್ಲಿ ತಿಳಿಸಲು ಇನ್ನೂ ಸಾಧ್ಯವಿಲ್ಲ.

5express ಇ(ಎ)ಕ್ಸ್‍ಪ್ರೆಸ್‍
ಸಕರ್ಮಕ ಕ್ರಿಯಾಪದ

(ಕಾಗದ, ಸರಕು, ಮೊದಲಾದವನ್ನು) ಮುದ್ದಾಮು ಕಳುಹಿಸು; ವಿಶೇಷ ಬಟವಾಡೆಯ ಮೂಲಕ ಬೇಗ ಕಳುಹಿಸು.