1express ಇ(ಎ)ಕ್ಸ್‍ಪ್ರೆಸ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) (ಹೋಲಿಕೆಯಲ್ಲಿ) ಕರಾರುವಾಕ್ಕಾದ; ಯಥಾವತ್ತಾದ; ನಿಷ್ಕೃಷ್ಟವಾದ: he is the express imgae of his father ಅವನು ಅವನ ತಂದೆಯ ಯಥಾವತ್ತಾದ ಪ್ರತಿರೂಪ.
  2. ಸ್ಪಷ್ಟ; ಸುವ್ಯಕ್ತ; ಸ್ಪಷ್ಟವಾಗಿ ಹೇಳಿದ; ಸರಿಯಾಗಿ ವ್ಯಕ್ತಪಡಿಸಿದ; ಬಾಯಿಬಿಟ್ಟು ಹೇಳಿದ: he cannot ignore such an express command ಅಷ್ಟು ಸ್ಪಷ್ಟವಾಗಿ ಕೊಟ್ಟ ಆಜ್ಞೆಯನ್ನು ಅವನು ಕಡೆಗಣಿಸಲಾರ.
  3. ಪ್ರತ್ಯೇಕ; ವಿಶೇಷ; ನಿರ್ದಿಷ್ಟ ಉದ್ದೇಶದಿಂದ ಮಾಡಿದ, ಕಳುಹಿಸಲ್ಪಟ್ಟ: we have an express purpose in being here ನಾವು ಇಲ್ಲಿರುವುದರಲ್ಲಿ ವಿಶೇಷ ಉದ್ದೇಶವಿದೆ.
  4. (ಸಂದೇಶಗಳ ಯಾ ಸರಕಿನ ವಿಷಯದಲ್ಲಿ) ವಿಶಿಷ್ಟ; ವಿಶೇಷ ದೂತನ ಮೂಲಕ ಯಾ ವಿಶೇಷ ವ್ಯವಸ್ಥೆಯ ಮೂಲಕ ಕಳುಹಿಸಿದ.
  5. ವೇಗದ; ಶೀಘ್ರಗತಿಯ.