See also 2expose
1expose ಇ(ಎ)ಕ್ಸ್‍ಪೋಸ್‍
ಸಕರ್ಮಕ ಕ್ರಿಯಾಪದ
  1. (ಗಾಳಿ, ಮಳೆ, ಬಿಸಿಲಿಗೆ — ವ್ಯಕ್ತಿಯನ್ನು, ವಸ್ತುವನ್ನು) ಒಡ್ಡು; ತೆರೆದಿಡು; ಹವೆಯಿಂದ ರಕ್ಷಿಸದೆ ಬಿಡು: expose one’s head to the rain ತಲೆಯನ್ನು ಮಳೆಗೆ ಒಡ್ಡು.
  2. (ಅಪಾಯ, ಪ್ರಭಾವ, ಕಾರ್ಯ, ಮೊದಲಾದವಕ್ಕೆ) ಒಳಪಡಿಸು; ಗುರಿಪಡಿಸು; ಗುರಿಮಾಡು; ಈಡುಮಾಡು: expose soldiers to gunfire ಸಿಪಾಯಿಗಳನ್ನು ಬಂದೂಕಿನೇಟಿಗೆ ಈಡುಮಾಡು. expose childern to good books ಮಕ್ಕಳನ್ನು ಒಳ್ಳೆಯ ಪುಸ್ತಕಗಳ ಪ್ರಭಾವಕ್ಕೆ ಒಳಪಡಿಸು.
  3. (ಛಾಯಾಚಿತ್ರಗ್ರಹಣದಲ್ಲಿ ಹಿಲಮನ್ನು) ಬೆಳಕಿಗೆ ಒಡ್ಡು.
  4. (ಚರಿತ್ರೆ) (ಕೂಸನ್ನು) ತ್ಯಜಿಸು; ತೊರೆ; ಮನೆಯಿಂದ ಹೊರಗೆಹಾಕಿ ಸಾಯಲು ಬಿಡು.
  5. (ಭೂತಕೃದಂತದಲ್ಲಿ) (ಪೂರ್ವದಿಕ್ಕು ಮೊದಲಾದವಕ್ಕೆ) ತೆರೆದಿರು.
  6. ತೋರಿಸು; ಪ್ರದರ್ಶಿಸು; ಕಾಣಿಸು: expose goods in a shop-window ಸಾಮಾನುಗಳನ್ನು ಅಂಗಡಿ ಕಿಟಕಿಯಲ್ಲಿ ಪ್ರದರ್ಶಿಸು.
  7. ಮಾರಾಟಕ್ಕಿಡು; ಬಿಕರಿಗೆ ಇಡು: I shall expose for sale at public auction ನಾನು ಬಹಿರಂಗ ಹರಾಜಿನಲ್ಲಿ ಮಾರಾಟಕ್ಕಿಡುತ್ತೇನೆ.
  8. (ಗುಟ್ಟು, ಯೋಜನೆ, ಮೊದಲಾದವನ್ನು) ಹೊರಗೆಡವು; ಬಹಿರಂಗ ಮಾಡು; ಬಯಲುಮಾಡು; ರಟ್ಟುಮಾಡು; ಪ್ರಕಟಗೊಳಿಸು: he exposed the secret ಗುಟ್ಟನ್ನು ಅವನು ರಟ್ಟುಮಾಡಿದನು.
  9. (ದುರುಳನನ್ನು, ದುರುಳತನವನ್ನು) ಬಯಲುಮಾಡು; ಬಯಲಿಗೆಳೆ; ಬೆಳಕಿಗೆ ತರು: he has behaved like a cad and ought to be exposed ಅವನು ನೀಚನಾಗಿ ವರ್ತಿಸಿದ್ದಾನೆ, ಆದ್ದರಿಂದ ಅವನನ್ನು ಬಯಲಿಗೆಳೆಯಲೇಬೇಕು.
See also 1expose
2expose ಇ(ಎ)ಕ್ಸ್‍ಪೋಸೇ
ನಾಮವಾಚಕ
  1. (ವಾಸ್ತವಾಂಶಗಳ) ಸಕ್ರಮ ನಿರೂಪಣೆ; ಸಂಗ್ರಹವರದಿ; ಸಂಗತಿಗಳ ಯಾ ಅಭಿಪ್ರಾಯಗಳ ಸಂಗ್ರಹವಾದ ವ್ಯವಸ್ಥಿತ ವರದಿ.
  2. (ಅಪಮಾನಕರವಾದುದನ್ನು) ಬಯಲಿಗೆಳೆಯುವುದು; ಹೊರಗೆಡಹುವುದು ; ಬಹಿರಂಗಗೊಳಿಸುವಿಕೆ; ಹೊರಗೆಹಾಕುವುದು; ಪ್ರಕಟಗೊಳಿಸುವುದು; ಎತ್ತಿ ತೋರಿಸುವುದು: a newspaper expose of crimes ವೃತ್ತ ಪತ್ರಿಕೆಯ ಮೂಲಕ ಅಕೃತ್ಯಗಳ ಪ್ರಕಟನೆ.