See also 2exponential
1exponential ಎಕ್ಸ್‍ಪನೆನ್ಷಲ್‍
ಗುಣವಾಚಕ
  1. (ಗಣಿತ) ಘಾತೀಯ:
    1. ಘಾತದ; ಘಾತಕ್ಕೆ ಸಂಬಂಧಿಸಿದ (ಮುಖ್ಯವಾಗಿ ಚರಘಾತವುಳ್ಳ): exponential expression ಘಾತೀಯ ಉಕ್ತಿ; ಚರಘಾತವುಳ್ಳ ಉಕ್ತಿ.
    2. ಘಾತೀಯ ಸಮೀಕರಣದಿಂದ ನಿರೂಪಿಸಬಹುದಾದ: ‘$a$’ shows an exponential rise with respect to ‘$b$’. ‘$b$’ಗೆ ಸಂಬಂಧಿಸಿದಂತೆ ‘$a$’ ಯಲ್ಲಿ ಘಾತೀಯ ಏರಿಕೆ ಕಂಡುಬರುತ್ತದೆ (ಅಂದರೆ $a=x^b$ ಸಮೀಕರಣದಲ್ಲಿ $b$ ಏರುತ್ತ ಹೋದಂತೆ $a$ ಹೇಗೆ ಅತಿ ವೇಗದಿಂದ ಏರುವುದೋ ಹಾಗೆ).
  2. (ಹೆಚ್ಚಳ ಮೊದಲಾದವುಗಳ ವಿಷಯದಲ್ಲಿ) ಹೆಚ್ಚುಹೆಚ್ಚು ತ್ವರಿತವಾದ; ಶೀಘ್ರತರವಾದ.
See also 1exponential
2exponential ಎಕ್ಸ್‍ಪನೆನ್ಷಲ್‍
ನಾಮವಾಚಕ

(ಗಣಿತ) ಘಾತೀಯ; ನಿರ್ದೇಶಿತ ಉಕ್ತಿಯನ್ನು ಘಾತವಾಗಿ ಹಾಕಿದರೆ ಬರುವ ಉಕ್ತಿ (ಉದಾಹರಣೆಗೆ $e^{ (3x+2)}$ ಎಂಬುದು $(3x+2)$ ಎಂಬುದರ ಘಾತ).