See also 2exhibit
1exhibit ಇ(ಎ)ಗ್‍ಸಿಬಿಟ್‍
ನಾಮವಾಚಕ
  1. ದಾಖಲೆ; ಲಿಖಿತಸಾಕ್ಷ್ಯದಲ್ಲಿ ಸೂಚಿಸಿರುವ ಮತ್ತು ನ್ಯಾಯಸ್ಥಾನದಲ್ಲಿ ಹಾಜರುಮಾಡಿದ ದಸ್ತೈವಜು ಯಾ ವಸ್ತು: introduced the weapons into evidence as exhibits ಆಯುಧಗಳನ್ನು ದಾಖಲೆವಸ್ತುಗಳಾಗಿ ಸಾಕ್ಷ್ಯದಲ್ಲಿ ಸೇರಿಸಿದನು.
  2. ಪ್ರದರ್ಶನ ವಸ್ತು; ಪ್ರದರ್ಶನ ವಸ್ತುಗಳ ಸಂಗ್ರಹ; ವ್ಯಕ್ತಿ, ಸಂಸ್ಥೆ, ಮೊದಲಾದವುಗಳಿಂದ ಪ್ರದರ್ಶನಕ್ಕಾಗಿ ಕಳುಹಿಸಲ್ಪಟ್ಟ ವಸ್ತು ಯಾ ವಸ್ತುಗಳ ಸಂಗ್ರಹ.
ಪದಗುಚ್ಛ

exhibit A

  1. ಮೊದಲನೆ ದಾಖಲೆ; ಪ್ರಥಮ ದಾಖಲೆ; ಕೋರ್ಟಿನಲ್ಲಿ ಸಲ್ಲಿಸಿದ ಲಿಖಿತ ಸಾಕ್ಷ್ಯದ ಪಟ್ಟಿಯಲ್ಲಿನ ಮೊದಲನೆ ದಸ್ತೈವಜು ಯಾ ವಸ್ತು.
  2. (ರೂಪಕವಾಗಿ) (ಮಹತ್ವಪೂರ್ಣವಾದ) ಸಾಕ್ಷ್ಯವೆಂದು ಭಾವಿತವಾದ ವಸ್ತು ಯಾ ವ್ಯಕ್ತಿ.
See also 1exhibit
2exhibit ಇ(ಎ)ಗ್‍ಸಿಬಿಟ್‍
ಸಕರ್ಮಕ ಕ್ರಿಯಾಪದ
  1. ತೋರಿಸು; ತೋರ್ಪಡಿಸು; ಪ್ರದರ್ಶಿಸು.
  2. ಪರಿಶೀಲನೆಗೆ ಒಪ್ಪಿಸು.
  3. (ಗುಣವನ್ನು) ವ್ಯಕ್ತಪಡಿಸು; ಪ್ರಕಾಶಪಡಿಸು; ತೋರಿಸು; ಪ್ರಕಟಿಸು: the girls exhibited great powers of endurance during the climb ಬೆಟ್ಟ ಹತ್ತುವಾಗ ಬಾಲಕಿಯರು ಹೆಚ್ಚಿನ ಸಹನಶಕ್ತಿಯನ್ನು ತೋರಿಸಿದರು,
  4. (ವಿನೋದಕ್ಕಾಗಿ ಸ್ಪರ್ಧೆ ಮೊದಲಾದವುಗಳಲ್ಲಿ) ಬಹಿರಂಗವಾಗಿ ಪ್ರದರ್ಶಿಸು: exhibit paintings in an art gallery ವರ್ಣಚಿತ್ರಗಳನ್ನು ಕಲಾಮಂದಿರದಲ್ಲಿ ಪ್ರದರ್ಶಿಸು.