See also 2exhibit
1exhibit ಇ(ಎ)ಗ್‍ಸಿಬಿಟ್‍
ನಾಮವಾಚಕ
  1. ದಾಖಲೆ; ಲಿಖಿತಸಾಕ್ಷ್ಯದಲ್ಲಿ ಸೂಚಿಸಿರುವ ಮತ್ತು ನ್ಯಾಯಸ್ಥಾನದಲ್ಲಿ ಹಾಜರುಮಾಡಿದ ದಸ್ತೈವಜು ಯಾ ವಸ್ತು: introduced the weapons into evidence as exhibits ಆಯುಧಗಳನ್ನು ದಾಖಲೆವಸ್ತುಗಳಾಗಿ ಸಾಕ್ಷ್ಯದಲ್ಲಿ ಸೇರಿಸಿದನು.
  2. ಪ್ರದರ್ಶನ ವಸ್ತು; ಪ್ರದರ್ಶನ ವಸ್ತುಗಳ ಸಂಗ್ರಹ; ವ್ಯಕ್ತಿ, ಸಂಸ್ಥೆ, ಮೊದಲಾದವುಗಳಿಂದ ಪ್ರದರ್ಶನಕ್ಕಾಗಿ ಕಳುಹಿಸಲ್ಪಟ್ಟ ವಸ್ತು ಯಾ ವಸ್ತುಗಳ ಸಂಗ್ರಹ.
ಪದಗುಚ್ಛ

exhibit A

  1. ಮೊದಲನೆ ದಾಖಲೆ; ಪ್ರಥಮ ದಾಖಲೆ; ಕೋರ್ಟಿನಲ್ಲಿ ಸಲ್ಲಿಸಿದ ಲಿಖಿತ ಸಾಕ್ಷ್ಯದ ಪಟ್ಟಿಯಲ್ಲಿನ ಮೊದಲನೆ ದಸ್ತೈವಜು ಯಾ ವಸ್ತು.
  2. (ರೂಪಕವಾಗಿ) (ಮಹತ್ವಪೂರ್ಣವಾದ) ಸಾಕ್ಷ್ಯವೆಂದು ಭಾವಿತವಾದ ವಸ್ತು ಯಾ ವ್ಯಕ್ತಿ.