See also 2excuse
1excuse ಇ(ಎ)ಕ್ಸ್‍ಕ್ಯೂಸ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯನ್ನು, ಕಾರ್ಯವನ್ನು, ತಪ್ಪನ್ನು) ಮನ್ನಿಸು; ಕ್ಷಮಿಸು; ಕ್ಷಮಾಪಣೆಮಾಡು; ಮಾಹುಮಾಡು.
  2. (ವ್ಯಕ್ತಿಗಾಗಿ, ತನಗಾಗಿ, ಕರ್ತವ್ಯ ಮೊದಲಾದವುಗಳಿಂದ) ಬಿಡುಗಡೆ ಪಡೆ; ವಿನಾಯಿತಿ ಪಡೆ; ತಪ್ಪಿಸಿಕೊ: asked the principal to excuse the boys from religious services ಬಾಲಕರಿಗೆ ಮತೀಯ ಆರಾಧನೆಗಳಿಂದ ವಿನಾತಿ ಕೊಡಬೇಕೆಂದು ಪ್ರಿನ್ಸಿಪಾಲರನ್ನು ಕೇಳಿದನು.
  3. (ವಸ್ತುಗಳ ವಿಷಯದಲ್ಲಿ) (ವ್ಯಕ್ತಿಯನ್ನು) ನಿರ್ದೋಷಿಯೆಂದು ತೋರಿಸು; ನಿರಪರಾಧಿಯೆಂದು ತೋರಿಸು; ತಪ್ಪು ಮಾಡಿಲ್ಲವೆಂದು ತೋರಿಸು.
  4. (ವಸ್ತುಗಳ ವಿಷಯದಲ್ಲಿ) (ಕಾರ್ಯ) ತಪ್ಪಿಲ್ಲವೆಂದು ತೋರಿಸು; ಆಪರಾಧವಲ್ಲವೆಂದು ತೋರಿಸು.
  5. (ವ್ಯಕ್ತಿಯನ್ನು ಯಾವುದೇ ಕರ್ತವ್ಯ ಮೊದಲಾದವುಗಳಿಂದ) ಬಿಡುಗಡೆ ಮಾಡು; ವಿನಾಯಿತಿ ನೀಡು: he was excused from attending the meeting ಅವನಿಗೆ ಸಭೆಯ ಹಾಜರಾತಿಯಿಂದ ವಿನಾಯಿತಿ ದೊರಕಿತು.
  6. (ಸಲ್ಲ ಬೇಕಾದುದನ್ನು, ಮಾಡಬೇಕಾದುದನ್ನು) ಒತ್ತಾಯ ಮಾಡದಿರು; ನಿರ್ಬಂಧಿಸದಿರು; ಒತ್ತಾಯಿಸದಿರು; ಬಿಟ್ಟುಕೊಡು: we will excuse your presence ನೀವು ಬರಬೇಕೆಂದು ನಾವು ಒತ್ತಾಯಿಸುವುದಿಲ್ಲ. we excuse the fee ರುಸುಮನ್ನು ಬಿಟ್ಟುಕೊಡುತ್ತೇವೆ.
  7. ನೆವಹೇಳು; ಸಮರ್ಥಿಸಿಕೊ; ವಿವರಣೆ ನೀಡು; ಸಮಾಧಾನ ಹೇಳು; ತಪ್ಪನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸು: he excused his absence by saying that he was out of town ಅವನು ಬರದಿದ್ದುದಕ್ಕೆ ತಾನು ಊರಲ್ಲಿರಲಿಲ್ಲವೆಂಬ ನೆವ ಹೇಳಿದ.
  8. ನೆವವಾಗಿರು; ಸಮರ್ಥನೆಯಾಗಿರು; ಸಮಾಧಾನವಾಗಿರು; ಸಮರ್ಥಿಸು: ignorance of the law excuses no one from doing his duty ತನ್ನ ಕರ್ತವ್ಯ ನೆರವೇರಿಸದಿರುವುದಕ್ಕೆ ಕಾನೂನಿನ ಅಜ್ಞಾನ ಯಾರಿಗೂ ಸಮರ್ಥನೆಯಾಗುವುದಿಲ್ಲ.
ಪದಗುಚ್ಛ
  1. excuse me ಕ್ಷಮಿಸಿ (ಮರ್ಯಾದೆಯ ಸಂಪ್ರದಾಯ ತಪ್ಪಿದ್ದಕ್ಕೆ, ಮಧ್ಯೆ ಅಡ್ಡಬಂದುದಕ್ಕೆ ಕ್ಷಮೆ ಬೇಡಿ ಹೇಳುವ ಮಾತು, ಒಪ್ಪಿಗೆ ಕೊಡದಿರುವ ಸಂದರ್ಭದಲ್ಲಿ ಸಹ ಪ್ರಯೋಗ): excuse me, but I don’t think that statment is quite true ಕ್ಷಮಿಸಬೇಕು, ಆ ಹೇಳಿಕೆ ಪೂರ್ತಿ ಸತ್ಯವೆಂಬುದಾಗಿ ನಾನು ಹೇಳಲಾರೆ.
  2. excuse me dance ಕ್ಷಮಾನೃತ್ಯ; ಕ್ಷಮೆ ಕುಣಿತ; ಒಬ್ಬರು ಇನ್ನೊಬ್ಬರ ಜೊತೆಗಾರ, ಜೊತೆಗಾರ್ತಿಯ ಜತೆ ಕೋರಿ ಕುಣಿಯಬಹುದಾದ ನೃತ್ಯ.
ನುಡಿಗಟ್ಟು

be excused (ಆಡುಮಾತು) ಕೊಠಡಿ ಮೊದಲಾದವನ್ನು ಬಿಟ್ಟು ಹೋಗಲು, ಉದಾಹರಣೆಗೆ ಶೌಚಗೃಹಕ್ಕೆ ಹೋಗಲು, ಅಪ್ಪಣೆ, ಅನುಮತಿ ಪಡೆ.

See also 1excuse
2excuse ಇ(ಎ)ಕ್ಸ್‍ಕ್ಯೂಸ್‍
ನಾಮವಾಚಕ
  1. ಕ್ಷಮೆ; ಕ್ಷಮಾಪಣೆ.
  2. ನೆಪ; ಸಮಾಧಾನ; ಸಮರ್ಥನೆ.
  3. ಕ್ಷಮಾಕಾರಣ; ಕ್ಷಮಾಪಣೆಯ ಕಾರಣ: he made his ill health an excuse for everything ಅವನು ಪ್ರತಿಯೊಂದಕ್ಕೂ ತನ್ನ ಅನಾರೋಗ್ಯವನ್ನು ಕ್ಷಮಾಕಾರಣವಾಗಿ ಒಡ್ಡಿದನು.
  4. (ಕರ್ತವ್ಯ ಮೊದಲಾದವುಗಳಿಂದ) ವಿನಾಯಿತಿಗೆ ಕಾರಣ: his excuse for being late was unacceptable ಹೊತ್ತಾಗಿ ಬಂದದ್ದಕ್ಕೆ, ತಡವಾದುದಕ್ಕೆ ಅವನು ಕೊಟ್ಟ ಕಾರಣ ಒಪ್ಪುವಂಥದಲ್ಲ.
  5. (ಯಾವುದೇ ಒಂದರ) ನೆಪಮಾತ್ರದ್ದು; ಹೆಸರಿಗೆ ಮಾತ್ರದ್ದು; ಕೀಳು ಮಟ್ಟದ ಮಾದರಿ; ಕಳಪೆ ನಮೂನೆ: his latest work is a poor excuse for a novel ಅವನ ಇತ್ತೀಚಿನ ಕೃತಿ ನೆಪಮಾತ್ರಕ್ಕೆ ಒಂದು ಕಾದಂಬರಿ.
ಪದಗುಚ್ಛ
  1. in excuse of ಕ್ಷಮಾಪಣೆಯಾಗಿ: pleading so wisley in excuse of it ಅದರ ಕ್ಷಮಾಪಣೆಗಾಗಿ ಅಷ್ಟು ಬುದ್ಧಿವಂತಿಕೆಯಿಂದ ವಾದಿಸುತ್ತಾ.
  2. without excuse (ವಿನಾಯಿತಿಗೆ) ಸರಿಯಾದ ಕಾರಣವಿಲ್ಲದೆ: absence without (good) excuse will be punished ಸರಿಯಾದ ಕಾರಣವಿಲ್ಲದೆ ಗೈರು ಹಾಜರಾದರೆ ಶಿಕ್ಷೆಗೊಳಗಾಗಬೇಕಾಗುತ್ತದೆ.