See also 1excuse
2excuse ಇ(ಎ)ಕ್ಸ್‍ಕ್ಯೂಸ್‍
ನಾಮವಾಚಕ
  1. ಕ್ಷಮೆ; ಕ್ಷಮಾಪಣೆ.
  2. ನೆಪ; ಸಮಾಧಾನ; ಸಮರ್ಥನೆ.
  3. ಕ್ಷಮಾಕಾರಣ; ಕ್ಷಮಾಪಣೆಯ ಕಾರಣ: he made his ill health an excuse for everything ಅವನು ಪ್ರತಿಯೊಂದಕ್ಕೂ ತನ್ನ ಅನಾರೋಗ್ಯವನ್ನು ಕ್ಷಮಾಕಾರಣವಾಗಿ ಒಡ್ಡಿದನು.
  4. (ಕರ್ತವ್ಯ ಮೊದಲಾದವುಗಳಿಂದ) ವಿನಾಯಿತಿಗೆ ಕಾರಣ: his excuse for being late was unacceptable ಹೊತ್ತಾಗಿ ಬಂದದ್ದಕ್ಕೆ, ತಡವಾದುದಕ್ಕೆ ಅವನು ಕೊಟ್ಟ ಕಾರಣ ಒಪ್ಪುವಂಥದಲ್ಲ.
  5. (ಯಾವುದೇ ಒಂದರ) ನೆಪಮಾತ್ರದ್ದು; ಹೆಸರಿಗೆ ಮಾತ್ರದ್ದು; ಕೀಳು ಮಟ್ಟದ ಮಾದರಿ; ಕಳಪೆ ನಮೂನೆ: his latest work is a poor excuse for a novel ಅವನ ಇತ್ತೀಚಿನ ಕೃತಿ ನೆಪಮಾತ್ರಕ್ಕೆ ಒಂದು ಕಾದಂಬರಿ.
ಪದಗುಚ್ಛ
  1. in excuse of ಕ್ಷಮಾಪಣೆಯಾಗಿ: pleading so wisley in excuse of it ಅದರ ಕ್ಷಮಾಪಣೆಗಾಗಿ ಅಷ್ಟು ಬುದ್ಧಿವಂತಿಕೆಯಿಂದ ವಾದಿಸುತ್ತಾ.
  2. without excuse (ವಿನಾಯಿತಿಗೆ) ಸರಿಯಾದ ಕಾರಣವಿಲ್ಲದೆ: absence without (good) excuse will be punished ಸರಿಯಾದ ಕಾರಣವಿಲ್ಲದೆ ಗೈರು ಹಾಜರಾದರೆ ಶಿಕ್ಷೆಗೊಳಗಾಗಬೇಕಾಗುತ್ತದೆ.