See also 2except  3except
1except ಇ(ಎ)ಕ್ಸೆಪ್ಟ್‍
ಸಕರ್ಮಕ ಕ್ರಿಯಾಪದ
  1. (ಎಣಿಕೆಯಿಂದ, ಹೇಳಿಕೆಯಿಂದ, ಯಾವುದನ್ನಾದರೂ) ವರ್ಜಿಸು; ಬಿಟ್ಟುಬಿಡು; ಹೊರತುಮಾಡು; ವಿನಾಯಿಸು; ವಿನಾಯಿತಿ ಕೊಡು: present company excepted ಇಲ್ಲಿರುವವರನ್ನು ಬಿಟ್ಟು. except him from the general pardon ಎಲ್ಲರನ್ನೂ ಕ್ಷಮಿಸುವ ಅಪ್ಪಣೆಗೆ ಅವನನ್ನು ಹೊರತುಮಾಡು.
  2. ವಿರೋಧಿಸು; ಆಕ್ಷೇಪಿಸು; ಪ್ರತಿಭಟಿಸು.
ಅಕರ್ಮಕ ಕ್ರಿಯಾಪದ

ಬಿಟ್ಟುಬಿಡು; ವಿನಾಯಿತಿಮಾಡು; ಹೊರತಾಗಿಸು.

See also 1except  3except
2except ಇ(ಎ)ಕ್ಸೆಪ್ಟ್‍
ಉಪಸರ್ಗ

ಹೊರತು; ಬಿಟ್ಟು; ಉಳಿದು; ವಿನಾ; ಒಳಗೊಳ್ಳದೆ; ವಿನಾಯಿಸಿ: we all failed except him ಅವನನ್ನು ಬಿಟ್ಟು ನಾವೆಲ್ಲ ನಪಾಸಾದೆವು. it is right except that the accents are omitted ಸ್ವರಘಾತಗಳು ಬಿಟ್ಟುಹೋಗಿವೆಯೆಂಬುದನ್ನು ಬಿಟ್ಟರೆ ಅದು ಸರಿಯಾಗಿದೆ.

See also 1except  2except
3except ಇ(ಎ)ಕ್ಸೆಪ್ಟ್‍
ಸಂಯೋಜಕಾವ್ಯಯ

(ಮುಖ್ಯವಾಗಿ ಪ್ರಾಚೀನ ಪ್ರಯೋಗ) ಹೊರತು; ಬಿಟ್ಟರೆ; ಇಲ್ಲದಿದ್ದರೆ; ಆಗದಿದ್ದರೆ: except he be born again ಅವನು ಪುನಃ ಹುಟ್ಟದಿದ್ದರೆ; ಅವನು ಪುನಃ ಹುಟ್ಟಿದ ಹೊರತು.