See also 2essential
1essential ಇ(ಎ)ಸೆನ್ಷಲ್‍
ಗುಣವಾಚಕ
  1. (ಆಧ್ಯಾತ್ಮಿಕ ಯಾ ಅಭೌತಿಕ) ಇರುವಿನ; ಅಸ್ತಿತ್ವದ.
  2. ಸತ್ತಿನ; ಪರಮಸತ್ತ್ವದ; ಮೂಲತತ್ತ್ವದ; ಇಂದ್ರಿಯಗೋಚರ ವಿಷಯಗಳ ಹಿಂದೆ ಅಡಗಿರುವ ಸತ್ಯದ.
  3. (ವಸ್ತುವಿನ) ಸಾರಭೂತವಾದ; ಸಾರವನ್ನೊಳಗೊಂಡ; ಸಾರಸರ್ವಸ್ವದ.
  4. ಮೂಲಭೂತವಾದ; ಮೂಲ; ಮೂಲಗುಣದ; ನೈಜಸ್ವಭಾವದ.
  5. ಅತ್ಯಗತ್ಯ; ಅತ್ಯಾವಶ್ಯಕ; ಬೇಕೇಬೇಕಾದ: is wealth essential to happiness? ಐಶ್ವರ್ಯ ಸುಖಕ್ಕೆ ಅತ್ಯಗತ್ಯವೇ?
  6. ಅತ್ಯಂತ ಮುಖ್ಯವಾದ; ಬಹು ಮುಖ್ಯವಾದ; ಪ್ರಮುಖವಾದ; ಪ್ರಧಾನವಾದ; ಮಹತ್ವಪೂರ್ಣ.
  7. (ರೋಗದ ವಿಷಯದಲ್ಲಿ) ಸ್ವತಂತ್ರವಾದ; ಅಜ್ಞಾತಕಾರಣದ; ಬೇರಾವುದೇ ರೋಗದ ಫಲವಾಗಿರದ ಯಾ ಕಾರಣ ಗೊತ್ತಿಲ್ಲದ.
  8. ಸಾರವಾದ; ಸತ್ತ್ವವನ್ನು ಹೋಲುವ; ಸತ್ತ್ವದಂಥ.
ಪದಗುಚ್ಛ
  1. essential character ವೈಶಿಷ್ಟ್ಯ; ವಿಶಿಷ್ಟ ಲಕ್ಷಣ; (ವಂಶ, ಜಾತಿ, ಮೊದಲಾದವುಗಳ ವಿಷಯದಲ್ಲಿ) ಅವುಗಳ ಜೊತೆಯಲ್ಲಿರುವ ಇತರ ವಸ್ತುಗಳಿಂದ ಪ್ರತ್ಯೇಕಿಸುವಂಥ ಗುರುತುಗಳು, ಲಕ್ಷಣಗಳು.
  2. essential harmony ವಿಶಿಷ್ಟ ಮೇಳ; ಯಾವುದೇ ಕೃತಿಗೆ ಆಧಾರವಾಗಿರುವ ಒಂದು ಸ್ವರಶ್ರೇಣಿಗೆ ವಿಶಿಷ್ಟವಾದ ಮೇಳ.
See also 1essential
2essential ಇ(ಎ)ಸೆನ್ಷಲ್‍
ನಾಮವಾಚಕ

(ಮುಖ್ಯವಾಗಿ ಬಹುವಚನದಲ್ಲಿ) ಅತ್ಯಗತ್ಯ ಅಂಶ; ಅವಶ್ಯವಾದುದು; ಬೇಕೇಬೇಕಾದುದು: the essentials of good life ಒಳ್ಳೆಯ ಜೀವನದ ಅತ್ಯಗತ್ಯ ಅಂಶಗಳು.