1essential
ಇ(ಎ)ಸೆನ್ಷಲ್
ಗುಣವಾಚಕ
- (ಆಧ್ಯಾತ್ಮಿಕ ಯಾ ಅಭೌತಿಕ) ಇರುವಿನ; ಅಸ್ತಿತ್ವದ.
- ಸತ್ತಿನ; ಪರಮಸತ್ತ್ವದ; ಮೂಲತತ್ತ್ವದ; ಇಂದ್ರಿಯಗೋಚರ ವಿಷಯಗಳ ಹಿಂದೆ ಅಡಗಿರುವ ಸತ್ಯದ.
- (ವಸ್ತುವಿನ) ಸಾರಭೂತವಾದ; ಸಾರವನ್ನೊಳಗೊಂಡ; ಸಾರಸರ್ವಸ್ವದ.
- ಮೂಲಭೂತವಾದ; ಮೂಲ; ಮೂಲಗುಣದ; ನೈಜಸ್ವಭಾವದ.
- ಅತ್ಯಗತ್ಯ; ಅತ್ಯಾವಶ್ಯಕ; ಬೇಕೇಬೇಕಾದ: is wealth essential to happiness? ಐಶ್ವರ್ಯ ಸುಖಕ್ಕೆ ಅತ್ಯಗತ್ಯವೇ?
- ಅತ್ಯಂತ ಮುಖ್ಯವಾದ; ಬಹು ಮುಖ್ಯವಾದ; ಪ್ರಮುಖವಾದ; ಪ್ರಧಾನವಾದ; ಮಹತ್ವಪೂರ್ಣ.
- (ರೋಗದ ವಿಷಯದಲ್ಲಿ) ಸ್ವತಂತ್ರವಾದ; ಅಜ್ಞಾತಕಾರಣದ; ಬೇರಾವುದೇ ರೋಗದ ಫಲವಾಗಿರದ ಯಾ ಕಾರಣ ಗೊತ್ತಿಲ್ಲದ.
- ಸಾರವಾದ; ಸತ್ತ್ವವನ್ನು ಹೋಲುವ; ಸತ್ತ್ವದಂಥ.
ಪದಗುಚ್ಛ
- essential character ವೈಶಿಷ್ಟ್ಯ; ವಿಶಿಷ್ಟ ಲಕ್ಷಣ; (ವಂಶ, ಜಾತಿ, ಮೊದಲಾದವುಗಳ ವಿಷಯದಲ್ಲಿ) ಅವುಗಳ ಜೊತೆಯಲ್ಲಿರುವ ಇತರ ವಸ್ತುಗಳಿಂದ ಪ್ರತ್ಯೇಕಿಸುವಂಥ ಗುರುತುಗಳು, ಲಕ್ಷಣಗಳು.
- essential harmony ವಿಶಿಷ್ಟ ಮೇಳ; ಯಾವುದೇ ಕೃತಿಗೆ ಆಧಾರವಾಗಿರುವ ಒಂದು ಸ್ವರಶ್ರೇಣಿಗೆ ವಿಶಿಷ್ಟವಾದ ಮೇಳ.