See also 2equal  3equal
1equal ಈಕ್ವಲ್‍
ಗುಣವಾಚಕ
  1. (ಸಂಖ್ಯೆ, ಗಾತ್ರ, ಮೌಲ್ಯ, ಪ್ರಮಾಣ, ಮಟ್ಟ, ಅಂತಸ್ತು, ಸ್ಥಾಯಿ, ಮೊದಲಾದವುಗಳಲ್ಲಿ) ಸರಿ; ಸಮ; ಸರಿಸಮ; ಎಣೆ; ಈಡು; ತೋಡು; ಸಮಾನ; ಜೋಡಿ: twice three is equal to six ಮೂರು ಎರಡಲ ಆರು. he speaks Kannada and English with equal ease ಅವನು ಕನ್ನಡ, ಇಂಗ್ಲಿಷ್‍ ಭಾಷೆಗಳೆರಡರಲ್ಲೂ ಸರಿಸಮವಾಗಿ ಯಾ ಅಷ್ಟೇ ಸುಲಭವಾಗಿ ಮಾತನಾಡುತ್ತಾನೆ.
  2. (ಯಾವುದನ್ನೇ ಮಾಡಲು) ಸಮರ್ಥ; ಶಕ್ತ; ಅದಕ್ಕೆ ತಕ್ಕಷ್ಟು ಶಕ್ತಿ, ಸಾಮರ್ಥ್ಯ, ಧೈರ್ಯಗಳನ್ನುಳ್ಳ: he is equal to the occasion ಅವನಿಗೆ ಆ ಸಂದರ್ಭವನ್ನು ಎದುರಿಸುವಷ್ಟು ಸಾಮರ್ಥ್ಯವುಂಟು: I am not equal to a cup of tea now ಈಗ ಒಂದು ಬಟ್ಟಲು ಚಹಾ ಕುಡಿಯುವುದಕ್ಕೂ ನನ್ನ ಕೈಲಾಗುವುದಿಲ್ಲ, ನಾನು ಶಕ್ತನಲ್ಲ.
  3. ಸಾರ್ವತ್ರಿಕ; ಎಲ್ಲರಿಗೂ ಅನ್ವಯಿಸುವಂಥ; ಎಲ್ಲರಿಗೂ ಸಮಾನವಾದ: equal laws ಸಾರ್ವತ್ರಿಕ ನ್ಯಾಯ; ಎಲ್ಲರಿಗೂ ಸಮಾನವಾದ ಕಾಯಿದೆಗಳು.
  4. ಸರಿಸಮನಾ; ಸರಿಸಾಟಿಯಾದ; ಈಡುಜೋಡಾದ: equal fight ಸಮ — ಯುದ್ಧ, ಕದನ, ಹೋರಾಟ.
  5. ಶಾಂತ(ಚಿತ್ತನಾದ); ಸ್ವಸ್ಥವಾದ; ಸಮಾಧಾನಕರ; ಸಮಚಿತ್ತದಿಂದ ಕೂಡಿದ: equal mind ಸ್ವಸ್ಥವಾದ ಮನಸ್ಸು.
See also 1equal  3equal
2equal ಈಕ್ವಲ್‍
ನಾಮವಾಚಕ
  1. (ಅಧಿಕಾರ, ಶಕ್ತಿ, ದರ್ಜೆ, ಮೊದಲಾದವುಗಳಲ್ಲಿ ಮತ್ತೊಬ್ಬನಿಗೆ) ಸಮನಾದವನು; ಸಮಾನ; ಸಮಾನಸ್ಕಂಧ; ಸರೀಕ: mix with your equals ನಿನ್ನ ಸರೀಕರೊಂದಿಗೆ ಸೇರು. he has no equal ಅವನ ಸರಿಸಮಾನರೇ ಇಲ್ಲ; ಅವನಿಗೆ ಎಣೆಯೇ ಇಲ್ಲ.
  2. (ಬಹುವಚನದಲ್ಲಿ) ಸಮಪ್ರಮಾಣಗಳು; ಸಮವಸ್ತುಗಳು: if equals be added to equals ಸಮಮೊತ್ತಗಳಿಗೆ ಸಮಮೊತ್ತಗಳನ್ನು ಸೇರಿಸಿದರೆ.
See also 1equal  2equal
3equal ಈಕ್ವಲ್‍
ಸಕರ್ಮಕ ಕ್ರಿಯಾಪದ
  1. (ಗುಣ, ಸಂಖ್ಯೆ, ಇವುಗಳ ವಿಷಯದಲ್ಲಿ, ಇನ್ನೊಂದರ ಜತೆ) ಸಮಮಾಡು; ಸಮವಾಗಿಸು; ಸಮೀಕರಿಸು; ಸರಿಸಮವಾಗು; ಸರಿತೂಗು; ಸಮವಾಗಿರು: production must equal the demand ಉತ್ಪತ್ತಿಯು ಬೇಡಿಕೆಗೆ ಸಮನಾಗಿರಬೇಕು.
  2. (ಸಾಹಸಕಾರ್ಯ, ಸಾಧನೆ, ಮೊದಲಾದವಲ್ಲಿ) ಸರಿಸಮನಾದುದನ್ನು ಮಾಡು; ಸಮಾನವಾಗು.