See also 2equal  3equal
1equal ಈಕ್ವಲ್‍
ಗುಣವಾಚಕ
  1. (ಸಂಖ್ಯೆ, ಗಾತ್ರ, ಮೌಲ್ಯ, ಪ್ರಮಾಣ, ಮಟ್ಟ, ಅಂತಸ್ತು, ಸ್ಥಾಯಿ, ಮೊದಲಾದವುಗಳಲ್ಲಿ) ಸರಿ; ಸಮ; ಸರಿಸಮ; ಎಣೆ; ಈಡು; ತೋಡು; ಸಮಾನ; ಜೋಡಿ: twice three is equal to six ಮೂರು ಎರಡಲ ಆರು. he speaks Kannada and English with equal ease ಅವನು ಕನ್ನಡ, ಇಂಗ್ಲಿಷ್‍ ಭಾಷೆಗಳೆರಡರಲ್ಲೂ ಸರಿಸಮವಾಗಿ ಯಾ ಅಷ್ಟೇ ಸುಲಭವಾಗಿ ಮಾತನಾಡುತ್ತಾನೆ.
  2. (ಯಾವುದನ್ನೇ ಮಾಡಲು) ಸಮರ್ಥ; ಶಕ್ತ; ಅದಕ್ಕೆ ತಕ್ಕಷ್ಟು ಶಕ್ತಿ, ಸಾಮರ್ಥ್ಯ, ಧೈರ್ಯಗಳನ್ನುಳ್ಳ: he is equal to the occasion ಅವನಿಗೆ ಆ ಸಂದರ್ಭವನ್ನು ಎದುರಿಸುವಷ್ಟು ಸಾಮರ್ಥ್ಯವುಂಟು: I am not equal to a cup of tea now ಈಗ ಒಂದು ಬಟ್ಟಲು ಚಹಾ ಕುಡಿಯುವುದಕ್ಕೂ ನನ್ನ ಕೈಲಾಗುವುದಿಲ್ಲ, ನಾನು ಶಕ್ತನಲ್ಲ.
  3. ಸಾರ್ವತ್ರಿಕ; ಎಲ್ಲರಿಗೂ ಅನ್ವಯಿಸುವಂಥ; ಎಲ್ಲರಿಗೂ ಸಮಾನವಾದ: equal laws ಸಾರ್ವತ್ರಿಕ ನ್ಯಾಯ; ಎಲ್ಲರಿಗೂ ಸಮಾನವಾದ ಕಾಯಿದೆಗಳು.
  4. ಸರಿಸಮನಾ; ಸರಿಸಾಟಿಯಾದ; ಈಡುಜೋಡಾದ: equal fight ಸಮ — ಯುದ್ಧ, ಕದನ, ಹೋರಾಟ.
  5. ಶಾಂತ(ಚಿತ್ತನಾದ); ಸ್ವಸ್ಥವಾದ; ಸಮಾಧಾನಕರ; ಸಮಚಿತ್ತದಿಂದ ಕೂಡಿದ: equal mind ಸ್ವಸ್ಥವಾದ ಮನಸ್ಸು.