See also 2engineer
1engineer ಎಂಜಿನಿಅರ್‍
ನಾಮವಾಚಕ
  1. ಎಂಜಿನಿಯರು:
    1. ಸೈನ್ಯಕ್ಕೆ ಬೇಕಾದ ರಸ್ತೆ, ಸೇತುವೆ, ಮೊದಲಾದವುಗಳನ್ನು ರೂಪಿಸಿ ಅವುಗಳ ನಿರ್ಮಾಣಕಾರ್ಯವನ್ನು ನೋಡಿಕೊಳ್ಳುವವ.
    2. ಸೇನಾವಿಭಾಗಕ್ಕೆ ಸೇರಿದ ನಿರ್ಮಾಣಕಾರ್ಯಗಳನ್ನು ನೋಡಿಕೊಳ್ಳುವ ಸಿಪಾಯಿ.
    3. ರಸ್ತೆ, ಸೇತುವೆಗಳು, ಕಾಲುವೆಗಳು, ಮೊದಲಾದ ಜನೋಪಯುಕ್ತ ಕಾರ್ಯಗಳನ್ನು ನೋಡಿಕೊಳ್ಳುವವ.
    4. ಎಂಜಿನು ತಯಾರಕ.
    5. ಎಂಜಿನ್‍ ಮೇಲ್ವಿಚಾರಕ.
    6. (ಅಮೆರಿಕನ್‍ ಪ್ರಯೋಗ) ಎಂಜಿನ್‍ ಚಾಲಕ.
    7. ಶಿಲ್ಪಿ; ಶಿಲ್ಪವಿಜ್ಞಾನಿ; ಶಿಲ್ಪಶಾಸ್ತ್ರಜ್ಞ; ಶಿಲ್ಪವಿಜ್ಞಾನದ ಯಾವುದೇ ಭಾಗದಲ್ಲಿ ತರಪೇತು ಪಡೆದು, ಅದನ್ನು ತ್ತಿಯಾಗಿ ಅವಲಂಬಿಸಿದವ: civil engineer ವಾಸ್ತುಶಿಲ್ಪಿ. mechanical engineer ಯಂತ್ರ ಶಿಲ್ಪಿ. electrical engineer ವಿದ್ಯುತ್‍ಶಿಲ್ಪಿ. mining engineer ಗಣಿಶಿಲ್ಪಿ. sanitary engineer ನೈರ್ಮಲ್ಯ ಶಿಲ್ಪಿ.
  2. ಕರ್ತೃ; ಕಾರಣಕರ್ತ; ಚತುರತೆಯಿಂದ ಯಾ ಕಲಾತ್ಮಕವಾಗಿ ಯೋಜನೆ ಮೊದಲಾದವನ್ನು ರೂಪಿಸುವವನು: the engineer of the compromise ಆ ಒಪ್ಪಂದದ ಕಾರಣಕರ್ತ.
  3. ಮಾನವಶಿಲ್ಪಿ; ಮನುಷ್ಯರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಶೇಷ ನೈಪುಣ್ಯವಿರುವ ವ್ಯಕ್ತಿ: human engineer ಮಾನವ ಶಿಲ್ಪಿ.
See also 1engineer
2engineer ಎಂಜಿನಿಅರ್‍
ಸಕರ್ಮಕ ಕ್ರಿಯಾಪದ
  1. (ಸೇತುವೆ, ರಸ್ತೆ, ಯಂತ್ರ, ಮೊದಲಾದವನ್ನು) ಶಿಲ್ಪಿಯಾಗಿ ರಚಿಸು, ನಿರ್ವಹಿಸು, ನಿರ್ಮಿಸು.
  2. (ಆಡುಮಾತು) (ಚಾತುರ್ಯದಿಂದ) ನಡೆಸು; ರೂಪಿಸು; ನಿರ್ವಹಿಸು; ವ್ಯವಸ್ಥೆಗೊಳಿಸು; ಆಗಮಾಡು: he engineered two revolutions ಅವನು ಎರಡು ಕ್ರಾಂತಿಗಳನ್ನು ನಡೆಸಿದ.
ಅಕರ್ಮಕ ಕ್ರಿಯಾಪದ

ಎಂಜಿನಿಯರ್‍ ಆಗಿ ಯೋಜಿಸು, ನಿರ್ಮಿಸು, ಕೆಲಸ ಮಾಡು.