See also 2emblem
1emblem ಎಂಬ್ಲಮ್‍
ನಾಮವಾಚಕ
  1. ಲಾಂಛನ; ಕುರುಹು; ಗುರುತು; ಚಿಹ್ನೆ; ಸಂಕೇತ.
  2. ಸಂಕೇತ; ಸಾಂಕೇತಿಕ ನಿರೂಪಣೆ: a balance is an emblem of justice ತಕ್ಕಡಿ ನ್ಯಾಯದ ಸಂಕೇತ.
  3. (ಪ್ರಾಚೀನ ಪ್ರಯೋಗ) ಸಾಂಕೇತಿಕ ಕಥೆ; (ಚಿತ್ರರೂಪದ) ಸಾಮತಿ ಕಥೆ; ಚಿತ್ರರೂಪದಲ್ಲಿ ರಚಿಸಿರುವ ಷ್ಟಾಂತ ಕಥೆ.
  4. (ವ್ಯಕ್ತಿಯ ವಿಷಯದಲ್ಲಿ, ಗುಣವೊಂದರ) ಮಾದರಿ; ಸಂಕೇತ: he is an emblem of courage ಅವನು ಧೈರ್ಯದ ಮಾದರಿ.
  5. ವಂಶಲಾಂಛನದ ಸಂಕೇತ.
  6. (ಗುರುತಿಸುವುದಕ್ಕಾಗಿ ಬಳಸುವ ಪ್ರಕಾಶಕರ ಮುದ್ರಾಂಕಿತದಂಥ) ಸಂಕೇತ; ಚಿಹ್ನೆ; ಮುದ್ರೆ; ಚಿತ್ರ; ಗುರುತು; ಮಾದರಿ.
See also 1emblem
2emblem ಎಂಬ್ಲಮ್‍
ಸಕರ್ಮಕ ಕ್ರಿಯಾಪದ

ಸಂಕೇತಿಸು; ಸಂಕೇತರೂಪವಾಗಿ ನಿರೂಪಿಸು; ಸಂಕೇತವಾಗಿ ಮಾಡು; ಸಂಕೇತದ ಮೂಲಕ ತೋರಿಸು.