See also 2elective
1elective ಇಲೆಕ್ಟಿವ್‍
ಗುಣವಾಚಕ
  1. (ಅಧಿಕಾರಿಯ ವಿಷಯದಲ್ಲಿ) ಚುನಾಯಿತ; ಚುನಾವಣೆಯಿಂದ ನೇಮಕಗೊಂಡ.
  2. (ಹುದ್ದೆಯ ವಿಷಯದಲ್ಲಿ) ಚುನಾವಣೆಯಿಂದ ಭರ್ತಿಯಾದ, ತುಂಬಿದ.
  3. (ಅಧಿಕಾರದ ವಿಷಯದಲ್ಲಿ) ಚುನಾವಣಾಪ್ರಾಪ್ತ; ಚುನಾವಣೆಯ ಮೂಲಕ ಸಿಕ್ಕಿದ, ಒದಗಿದ, ಲಬ್ಧವಾದ.
  4. ಚುನಾವಣೆ ಹಕ್ಕುಳ್ಳ; ಚುನಾಯಿಸುವ ಹಕ್ಕುಳ್ಳ.
  5. (ಪಠ್ಯಕ್ರಮದ ವಿಷಯದಲ್ಲಿ) ಐಚ್ಛಿಕ; ವಿದ್ಯಾರ್ಥಿಯು ಆರಿಸಿಕೊಳ್ಳಬಹುದಾದ.
  6. (ಶಸ್ತ್ರಚಿಕಿತ್ಸೆಯ ವಿಷಯದಲ್ಲಿ) ಜರೂರಲ್ಲದ; ತತ್‍ಕ್ಷಣದಲ್ಲಿ ಅಗತ್ಯವಾಗಿರದ.
  7. (ರಸಾಯನವಿಜ್ಞಾನ) ವರಣಶೀಲ; ಕೆಲವು ಪದಾರ್ಥಗಳ ಮೇಲೆ ಮಾತ್ರ ವರ್ತಿಸುವ ಯಾ ಕೆಲವು ಪದಾರ್ಥಗಳೊಂದಿಗೆ ಮಾತ್ರ ಸಂಬಂಧ ಕಲ್ಪಿಸಿಕೊಳ್ಳುವ.
See also 1elective
2elective ಇಲೆಕ್ಟಿವ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಆಯ್ಕೆ ವಿಷಯ; ಐಚ್ಛಿಕ ವಿಷಯ; ಪಠ್ಯಕ್ರಮದಲ್ಲಿ ಆಯ್ದುಕೊಳ್ಳಬಹುದಾದ ವಿಷಯ: his electives included English ಅವನ ಐಚ್ಛಿಕ ವಿಷಯಗಳಲ್ಲಿ ಇಂಗ್ಲಿಷ್‍ ಸೇರಿತ್ತು.