1elective
ಇಲೆಕ್ಟಿವ್
ಗುಣವಾಚಕ
- (ಅಧಿಕಾರಿಯ ವಿಷಯದಲ್ಲಿ) ಚುನಾಯಿತ; ಚುನಾವಣೆಯಿಂದ ನೇಮಕಗೊಂಡ.
- (ಹುದ್ದೆಯ ವಿಷಯದಲ್ಲಿ) ಚುನಾವಣೆಯಿಂದ ಭರ್ತಿಯಾದ, ತುಂಬಿದ.
- (ಅಧಿಕಾರದ ವಿಷಯದಲ್ಲಿ) ಚುನಾವಣಾಪ್ರಾಪ್ತ; ಚುನಾವಣೆಯ ಮೂಲಕ ಸಿಕ್ಕಿದ, ಒದಗಿದ, ಲಬ್ಧವಾದ.
- ಚುನಾವಣೆ ಹಕ್ಕುಳ್ಳ; ಚುನಾಯಿಸುವ ಹಕ್ಕುಳ್ಳ.
- (ಪಠ್ಯಕ್ರಮದ ವಿಷಯದಲ್ಲಿ) ಐಚ್ಛಿಕ; ವಿದ್ಯಾರ್ಥಿಯು ಆರಿಸಿಕೊಳ್ಳಬಹುದಾದ.
- (ಶಸ್ತ್ರಚಿಕಿತ್ಸೆಯ ವಿಷಯದಲ್ಲಿ) ಜರೂರಲ್ಲದ; ತತ್ಕ್ಷಣದಲ್ಲಿ ಅಗತ್ಯವಾಗಿರದ.
- (ರಸಾಯನವಿಜ್ಞಾನ) ವರಣಶೀಲ; ಕೆಲವು ಪದಾರ್ಥಗಳ ಮೇಲೆ ಮಾತ್ರ ವರ್ತಿಸುವ ಯಾ ಕೆಲವು ಪದಾರ್ಥಗಳೊಂದಿಗೆ ಮಾತ್ರ ಸಂಬಂಧ ಕಲ್ಪಿಸಿಕೊಳ್ಳುವ.