See also 2elastic
1elastic ಇಲ್ಯಾ(ಲಾ)ಸ್ಟಿಕ್‍
ಗುಣವಾಚಕ
  1. ಸ್ಥಿತಿಸ್ಥಾಪಕ; ಪ್ರತ್ಯಾಸ್ಥ; ಹಿಗ್ಗಿಸಿದಾಗ, ಕುಗ್ಗಿಸಿದಾಗ ಯಾ ಆತಿ ಕೆಡಿಸಿದಾಗ ತನಗೆ ತಾನೇ ಮೊದಲಿನ ಉದ್ದ, ಅಗಲ, ಗಾತ್ರ ಯಾ ಆತಿಗೆ ಬರುವ.
  2. (ಸ್ಟ್ರಿಂಗಿನಂತೆ) ಎಗರುವ.
  3. (ಮನುಷ್ಯರ ಯಾ ಭಾವನೆಗಳ ವಿಷಯದಲ್ಲಿ) ಉಲ್ಲಾಸಶೀಲ; ಸುಟಿಯಾದ.
  4. ಬಾಗುವ; ಹಿಗ್ಗುವ; ನಮ್ಯ; ಬಾಗಿಸಲಾಗುವ; ಹಿಗ್ಗಿಸಲಾಗುವ; ಹೊಂದಿಸಬಹುದಾದ.
  5. ಹೊಂದಿಸಬಹುದಾದ; ತಿರುಚಬಹುದಾದ: elastic conscience ಸಮಯಾನುಕೂಲದ ಆತ್ಮಸಾಕ್ಷಿ; ಸಮಯಕ್ಕೆ ತಕ್ಕಂತೆ, ತಿರುಚಬಹುದಾದ, ಹೊಂದಿಕೊಳ್ಳುವ ಆತ್ಮಸಾಕ್ಷಿ.
  6. (ಅರ್ಥಶಾಸ್ತ್ರ) (ಬೇಡಿಕೆಯ ವಿಷಯದಲ್ಲಿ) ಬೆಲೆಗೆ ಅನುಗುಣವಾಗಿ ಬದಲಾಗುವ, ವ್ಯತ್ಯಾಸವಾಗುವ.
  7. (ಭೌತವಿಜ್ಞಾನ) (ಘರ್ಷಣೆಯ ವಿಷಯದಲ್ಲಿ) ಸ್ಥಿತಿಸ್ಥಾಪಕ; ಪ್ರತ್ಯಾಸ್ಥ; ಗತಿಶಕ್ತಿ ಕಡಮೆಯಾಗದಿರುವ.
See also 1elastic
2elastic ಇಲ್ಯಾ(ಲಾ)ಸ್ಟಿಕ್‍
ನಾಮವಾಚಕ

(ಸಾಮಾನ್ಯವಾಗಿ ಇಂಡಿಯಾ ರಬ್ಬರಿನ ಎಳೆಗಳನ್ನು ಸೇರಿಸಿ ಹೆಣೆದಿರುವ) ಇಲಾಸ್ಟಿಕ್ಕು; ಹಿಗ್ಗು-ಹುರಿ, ದಾರ ಯಾ ಬಟ್ಟೆ; ಹಿಗ್ಗಲುಬಟ್ಟೆ ಯಾ ಹಿಗ್ಗಲುದಾರ; ಉದ್ದಮಾಡಲಾಗುವ ದಾರ ಯಾ ಬಟ್ಟೆ.