1elastic
ಗುಣವಾಚಕ
- ಸ್ಥಿತಿಸ್ಥಾಪಕ; ಪ್ರತ್ಯಾಸ್ಥ; ಹಿಗ್ಗಿಸಿದಾಗ, ಕುಗ್ಗಿಸಿದಾಗ ಯಾ ಆತಿ ಕೆಡಿಸಿದಾಗ ತನಗೆ ತಾನೇ ಮೊದಲಿನ ಉದ್ದ, ಅಗಲ, ಗಾತ್ರ ಯಾ ಆತಿಗೆ ಬರುವ.
- (ಸ್ಟ್ರಿಂಗಿನಂತೆ) ಎಗರುವ.
- (ಮನುಷ್ಯರ ಯಾ ಭಾವನೆಗಳ ವಿಷಯದಲ್ಲಿ) ಉಲ್ಲಾಸಶೀಲ; ಸುಟಿಯಾದ.
- ಬಾಗುವ; ಹಿಗ್ಗುವ; ನಮ್ಯ; ಬಾಗಿಸಲಾಗುವ; ಹಿಗ್ಗಿಸಲಾಗುವ; ಹೊಂದಿಸಬಹುದಾದ.
- ಹೊಂದಿಸಬಹುದಾದ; ತಿರುಚಬಹುದಾದ: elastic conscience ಸಮಯಾನುಕೂಲದ ಆತ್ಮಸಾಕ್ಷಿ; ಸಮಯಕ್ಕೆ ತಕ್ಕಂತೆ, ತಿರುಚಬಹುದಾದ, ಹೊಂದಿಕೊಳ್ಳುವ ಆತ್ಮಸಾಕ್ಷಿ.
- (ಅರ್ಥಶಾಸ್ತ್ರ) (ಬೇಡಿಕೆಯ ವಿಷಯದಲ್ಲಿ) ಬೆಲೆಗೆ ಅನುಗುಣವಾಗಿ ಬದಲಾಗುವ, ವ್ಯತ್ಯಾಸವಾಗುವ.
- (ಭೌತವಿಜ್ಞಾನ) (ಘರ್ಷಣೆಯ ವಿಷಯದಲ್ಲಿ) ಸ್ಥಿತಿಸ್ಥಾಪಕ; ಪ್ರತ್ಯಾಸ್ಥ; ಗತಿಶಕ್ತಿ ಕಡಮೆಯಾಗದಿರುವ.