See also 2egg
1egg ಎಗ್‍
ನಾಮವಾಚಕ
  1. (ಹಕ್ಕಿ, ಆಮೆ, ಸರೀಪ, ಮೊದಲಾದವುಗಳ) ಮೊಟ್ಟೆ; ತತ್ತಿ; ಅಂಡ; ಗುಡ್ಡು.
  2. (ಮುಖ್ಯವಾಗಿ ತಿನ್ನಲು ಬಳಸುವ) ಕೋಳಿಯ ಮೊಟ್ಟೆ.
  3. (ಪ್ರಾಣಿವಿಜ್ಞಾನ) ಸ್ತ್ರೀ ಅಂಡಾಣು.
  4. (ಜನಸಾಮಾನ್ಯ ಪ್ರಯೋಗದಲ್ಲಿ ಇರುವೆ ಮೊದಲಾದವುಗಳ) ಪೊರೆಹುಳು; ಕೋಶಹುಳು.
  5. (ಅಶಿಷ್ಟ) ವ್ಯಕ್ತಿ; ಆಸಾಮಿ; ಗಿರಾಕಿ; ಇಸಮು: tough egg ಜಗ್ಗದ ವ್ಯಕ್ತಿ.
  6. (ಅಶಿಷ್ಟ) ವಸ್ತು; ಪದಾರ್ಥ.
  7. (ಅಶಿಷ್ಟ) ಸ್ಫೋಟಕ; ಬಾಂಬು ಯಾ ನೆಲದಡಿಯ ಸಿಡಿಗುಂಡು.
ಪದಗುಚ್ಛ
  1. egg and anchor (ವಾಸ್ತುಶಿಲ್ಪ) ಅಂಡ ಮತ್ತು ತ್ರಿಕೋನ ಮೊದಲಾದ ಆತಿಗಳು ಪರ್ಯಾಯವಾಗಿ ಬರುವ ವಿವಿಧ ಉಬ್ಬುಕೆತ್ತನೆಗಳು.
  2. egg and dart = ಪದಗುಚ್ಛ \((1)\).
  3. egg and tongue= ಪದಗುಚ್ಛ \((1)\).
  4. as sure as eggs is (or are) eggs ಖಂಡಿತವಾಗಿ; ನಿಸ್ಸಂಶಯವಾಗಿ; ನಿಸ್ಸಂದೇಹವಾಗಿ; ನಿಸ್ಸಂದಿಗ್ಧವಾಗಿ.
ನುಡಿಗಟ್ಟು
  1. bad egg (ಅಶಿಷ್ಟ)
    1. ಅಪ್ರಯೋಜಕ ವ್ಯಕ್ತಿ; ಅಯೋಗ್ಯ ಆಸಾಮಿ.
    2. ಮೋಸಗಾರ.
    3. ಗೊಡ್ಡು ಯೋಜನೆ, ಹಂಚಿಕೆ; ನಿಷ್ಫಲವಾಗುವ ಯೋಜನೆ; ವ್ಯರ್ಥ ಹಂಚಿಕೆ.
  2. good eggs (ಅಶಿಷ್ಟ)
    1. ಒಳ್ಳೆಯ ಆಸಾಮಿ; ಯೋಗ್ಯ.
    2. ಒಳ್ಳೆಯ ವಸ್ತು.
    3. (ಅಭಿನಂದನಾಸೂಚಕವಾಗಿ) ಭಲೆ; ಭೇಷ್‍; ಶಾಭಾಸ್‍.
  3. have all one’s eggs in one basket ತನ್ನ ಸಮಸ್ತವನ್ನೂ ಒಂದೇ ಸಾಹಸ, ಉದ್ಯಮ ಯಾ ಪ್ರಯತ್ನದಲ್ಲಿ ಪಣವಾಗಿಸು, ಹೂಡು, ತೊಡಗಿಸು, ಒಡ್ಡು.
  4. in the egg
    1. ಮೊಳಕೆಯಲ್ಲಿ; ಪ್ರಾರಂಭ ದೆಸೆಯಲ್ಲಿ.
    2. ಇನ್ನೂ ಬೆಳೆಯದ, ವಿಕಸಿಸದ.
  5. teach one’s grandmother to suck eggs ಅಜ್ಜಿಗೆ ಕೆಮ್ಮಲು ಹೇಳಿಕೊಡು; ಅಜ್ಜನಿಗೆ ಅಂಬೆಗಾಲಿಡಲು ಕಲಿಸು; ತನಗಿಂತ ಹೆಚ್ಚು ಅನುಭವಿಗೆ ಬುದ್ಧಿವಾದ ಹೇಳು.
  6. with egg on one’s face (ಆಡುಮಾತು) ದಡ್ಡ ಕಳೆಯಿಂದ; ಪೆದ್ದು ಕಳೆಯಿಂದ.
See also 1egg
2egg ಎಗ್‍
ಸಕರ್ಮಕ ಕ್ರಿಯಾಪದ

(ಒಬ್ಬನನ್ನು ಒಂದು ಕೆಲಸಕ್ಕೆ) ಹುರಿದುಂಬಿಸು; ಪ್ರೇರಿಸು; ಪ್ರಚೋದಿಸು; ಪ್ರೇರೇಪಿಸು; ಪ್ರೋತ್ಸಾಹಿಸು; ಉಬ್ಬಿಸು.

ಪದಗುಚ್ಛ

egg on = 2egg.