1egg
ಎಗ್
ನಾಮವಾಚಕ
- (ಹಕ್ಕಿ, ಆಮೆ, ಸರೀಪ, ಮೊದಲಾದವುಗಳ) ಮೊಟ್ಟೆ; ತತ್ತಿ; ಅಂಡ; ಗುಡ್ಡು.
- (ಮುಖ್ಯವಾಗಿ ತಿನ್ನಲು ಬಳಸುವ) ಕೋಳಿಯ ಮೊಟ್ಟೆ.
- (ಪ್ರಾಣಿವಿಜ್ಞಾನ) ಸ್ತ್ರೀ ಅಂಡಾಣು.
- (ಜನಸಾಮಾನ್ಯ ಪ್ರಯೋಗದಲ್ಲಿ ಇರುವೆ ಮೊದಲಾದವುಗಳ) ಪೊರೆಹುಳು; ಕೋಶಹುಳು.
- (ಅಶಿಷ್ಟ) ವ್ಯಕ್ತಿ; ಆಸಾಮಿ; ಗಿರಾಕಿ; ಇಸಮು: tough egg ಜಗ್ಗದ ವ್ಯಕ್ತಿ.
- (ಅಶಿಷ್ಟ) ವಸ್ತು; ಪದಾರ್ಥ.
- (ಅಶಿಷ್ಟ) ಸ್ಫೋಟಕ; ಬಾಂಬು ಯಾ ನೆಲದಡಿಯ ಸಿಡಿಗುಂಡು.
ಪದಗುಚ್ಛ
- egg and anchor (ವಾಸ್ತುಶಿಲ್ಪ) ಅಂಡ ಮತ್ತು ತ್ರಿಕೋನ ಮೊದಲಾದ ಆತಿಗಳು ಪರ್ಯಾಯವಾಗಿ ಬರುವ ವಿವಿಧ ಉಬ್ಬುಕೆತ್ತನೆಗಳು.
- egg and dart = ಪದಗುಚ್ಛ \((1)\).
- egg and tongue= ಪದಗುಚ್ಛ \((1)\).
- as sure as eggs is (or are) eggs ಖಂಡಿತವಾಗಿ; ನಿಸ್ಸಂಶಯವಾಗಿ; ನಿಸ್ಸಂದೇಹವಾಗಿ; ನಿಸ್ಸಂದಿಗ್ಧವಾಗಿ.
ನುಡಿಗಟ್ಟು
- bad egg (ಅಶಿಷ್ಟ)
- ಅಪ್ರಯೋಜಕ ವ್ಯಕ್ತಿ; ಅಯೋಗ್ಯ ಆಸಾಮಿ.
- ಮೋಸಗಾರ.
- ಗೊಡ್ಡು ಯೋಜನೆ, ಹಂಚಿಕೆ; ನಿಷ್ಫಲವಾಗುವ ಯೋಜನೆ; ವ್ಯರ್ಥ ಹಂಚಿಕೆ.
- good eggs (ಅಶಿಷ್ಟ)
- ಒಳ್ಳೆಯ ಆಸಾಮಿ; ಯೋಗ್ಯ.
- ಒಳ್ಳೆಯ ವಸ್ತು.
- (ಅಭಿನಂದನಾಸೂಚಕವಾಗಿ) ಭಲೆ; ಭೇಷ್; ಶಾಭಾಸ್.
- have all one’s eggs in one basket ತನ್ನ ಸಮಸ್ತವನ್ನೂ ಒಂದೇ ಸಾಹಸ, ಉದ್ಯಮ ಯಾ ಪ್ರಯತ್ನದಲ್ಲಿ ಪಣವಾಗಿಸು, ಹೂಡು, ತೊಡಗಿಸು, ಒಡ್ಡು.
- in the egg
- ಮೊಳಕೆಯಲ್ಲಿ; ಪ್ರಾರಂಭ ದೆಸೆಯಲ್ಲಿ.
- ಇನ್ನೂ ಬೆಳೆಯದ, ವಿಕಸಿಸದ.
- teach one’s grandmother to suck eggs ಅಜ್ಜಿಗೆ ಕೆಮ್ಮಲು ಹೇಳಿಕೊಡು; ಅಜ್ಜನಿಗೆ ಅಂಬೆಗಾಲಿಡಲು ಕಲಿಸು; ತನಗಿಂತ ಹೆಚ್ಚು ಅನುಭವಿಗೆ ಬುದ್ಧಿವಾದ ಹೇಳು.
- with egg on one’s face (ಆಡುಮಾತು) ದಡ್ಡ ಕಳೆಯಿಂದ; ಪೆದ್ದು ಕಳೆಯಿಂದ.