See also 2easy  3easy  4easy
1easy ಈಸಿ
ಗುಣವಾಚಕ
  1. ಸುಖವಾದ; ಸ್ವಸ್ಥವಾದ; ಹಾಯಾದ; ಆರಾಮವಾದ.
  2. ಕಳವಳವಿಲ್ಲದ; ನಿಶ್ಚಿಂತ; ನಿರಾತಂಕ.
  3. ಸುಲಭವಾದ; ಸಲೀಸಾದ; ಸರಾಗವಾದ; ಕಷ್ಟವಲ್ಲದ: easy prey ಸುಲಭವಾಗಿ ಬಲಿಯಾಗುವ ವ್ಯಕ್ತಿ.
  4. ಸಂಕೋಚವಿಲ್ಲದ; ನಿಸ್ಸಂಕೋಚವಾದ.
  5. ಸರಳವಾದ; ಅತಿ ಕಟ್ಟು ನಿಟ್ಟಾಗಿರದ: easy manners ಸರಳವಾದ ನಡವಳಿಕೆ.
  6. ಸುಲಭನಮ್ಯ; ಸುಲಭವಾಗಿ — ಒಪ್ಪಿಸಲಾಗುವ, ಒಲಿಸಲಾಗುವ: a man of easy virtue (ಲಂಚ ಮೊದಲಾದ ಪ್ರಲೋಭನಕ್ಕೆ) ಸುಲಭವಾಗಿ ಬಗ್ಗುವ ವ್ಯಕ್ತಿ.
  7. (ಸರಕುಗಳ ವಿಷಯದಲ್ಲಿ) ಅಗ್ಗದ; ಸುಲಭವಾಗಿ ದೊರೆಯುವ.
  8. (ಮಾರುಕಟ್ಟೆ, ಪೇಟೆಗಳ ವಿಷಯದಲ್ಲಿ) ಹೆಚ್ಚು ಬೇಡಿಕೆಯಿಲ್ಲದ; ಗಿರಾಕಿ ಕಡಮೆಯಾದ; ಅಗ್ಗವಾದ; ಸೋವಿಯಾದ; ಭರಾಟೆ ಕುಗ್ಗಿದ; ಮಂದಿಯಾದ: the market is easy ಪೇಟೆ ಮಂದಿಯಾಗಿದೆ; (ಹೆಚ್ಚು ಬೇಡಿಕೆ ಇಲ್ಲದೆ) ಪೇಟೆಯಲ್ಲಿ (ವ್ಯಾಪಾರದ) ಭರಾಟೆ ಕಡಿಮೆಯಾಗಿದೆ.
ಪದಗುಚ್ಛ
  1. easy of access
    1. ಸುಲಭಸಾಧ್ಯ; ಸುಗಮ.
    2. ಸುಲಭಗಮ್ಯ: the present president is easy of access ಈಗಿನ ಅಧ್ಯಕ್ಷರು ಸುಲಭವಾಗಿ ಸಿಗುತ್ತಾರೆ.
  2. free and easy ಸಲೀಸಾದ; ಸರಳವಾದ; ಅತಿ ಕಟ್ಟು ನಿಟ್ಟಿಲ್ಲದ.
ನುಡಿಗಟ್ಟು
  1. easy circumstances ಅನುಕೂಲ ಸ್ಥಿತಿ; ಸದ್ಧಿ; ಐಶ್ವರ್ಯ.
  2. easy on the eye (ಆಡುಮಾತು) ನೋಡಲು ಸುಂದರವಾದ, ಅಂದವಾದ.
  3. I’m easy (ಆಡುಮಾತು) (ನನಗೆ ಉಭಯ ಪಕ್ಷಗಳ ಪೈಕಿ) ಯಾವ ಕಡೆಗೂ ಒಲವಿಲ್ಲ.
  4. woman of easy virute ನಡತೆಗೆಟ್ಟ ಹೆಂಗಸು; ವ್ಯಭಿಚಾರಿಣಿ.
See also 1easy  3easy  4easy
2easy ಈಸಿ
ಕ್ರಿಯಾವಿಶೇಷಣ
  1. ಸುಲಭವಾಗಿ; ಸಲೀಸಾಗಿ; ಸರಾಗವಾಗಿ; ಧಾವಂತಪಡದೆ.
  2. ಕಳವಳವಿಲ್ಲದಂತೆ; ಕಾತರಗೊಳ್ಳದಂತೆ.
ಪದಗುಚ್ಛ

stand easy! (ಬ್ರಿಟಿಷ್‍ ಪ್ರಯೋಗ) (ಸೈನಿಕ ಕವಾಯತಿನ ಆಜ್ಞೆ) ಪೂರ್ಣ ಆರಾಮವಾಗಿ ನಿಲ್ಲಿಸಿ ಸಾಮಾನ್ಯ ಆರಾಮ ನಿಲುವಿನಿಂದ (stand at ease) ಪೂರ್ತಿ ಆರಾಮ ನಿಲುವಿಗೆ (stand easy) ಬನ್ನಿ.

ನುಡಿಗಟ್ಟು
  1. easy does it ಎಚ್ಚರಿಕೆಯಿಂದ ಯಾ ಜಾಗರೂಕತೆಯಿಂದ ಹೋಗು.
  2. go easy
    1. ಮಿತವ್ಯಯಿಯಾಗಿರು.
    2. ಜೋಕೆಯಿಂದಿರು; ಎಚ್ಚರಿಕೆಯಿಂದಿರು.
  3. take it easy ಆರಾಮವಾಗಿ ಇರು; ಎಚ್ಚರಿಕೆಯಿಂದ ಮುಂದುವರಿ; ಎಷ್ಟು ಅಗತ್ಯವೋ ಅಷ್ಟು ಮಾತ್ರ ಮಾಡು; ತೊಂದರೆ ತೆಗೆದುಕೊಳ್ಳಬೇಡ; ಧಾವಂತಪಡಬೇಡ; ಆತುರಪಡಬೇಡ.
See also 1easy  2easy  4easy
3easy ಈಸಿ
ನಾಮವಾಚಕ

ಸ್ವಲ್ಪ, ಅಲ್ಪ, ಲಘು — ವಿಶ್ರಾಂತಿ.

ಪದಗುಚ್ಛ

an easy ಚಲಿಸುವಾಗ ಸಿಕ್ಕುವ ಲಘು ವಿಶ್ರಾಂತಿ: the ship reached the port without easy ನಡುವೆ ಒಮ್ಮೆಯೂ ವಿಶ್ರಾಂತಿಯಿಲ್ಲದೆ ಹಡಗು ಬಂದರನ್ನು ಮುಟ್ಟಿತು.

See also 1easy  2easy  3easy
4easy ಈಸಿ
ಅಕರ್ಮಕ ಕ್ರಿಯಾಪದ

(ಕವಾಯತು ಮೊದಲಾದವುಗಳನ್ನು ನಡೆಸುವ ಸಂದರ್ಭದಲ್ಲಿ ಆಜ್ಞೆಯಾಗಿ) ನಿಧಾನವಾಗಿ ನಡೆ!

ಪದಗುಚ್ಛ

easy all! (ಬ್ರಿಟಿಷ್‍ ಪ್ರಯೋಗ) (ಸಾಮಾನ್ಯವಾಗಿ ದೋಣಿ ನಡೆಸುವಲ್ಲಿ ಆಜ್ಞೆಯಾಗಿ) ನಿಲ್ಲು! ನಿಲ್ಲಿಸು!