See also 2easy  3easy  4easy
1easy ಈಸಿ
ಗುಣವಾಚಕ
  1. ಸುಖವಾದ; ಸ್ವಸ್ಥವಾದ; ಹಾಯಾದ; ಆರಾಮವಾದ.
  2. ಕಳವಳವಿಲ್ಲದ; ನಿಶ್ಚಿಂತ; ನಿರಾತಂಕ.
  3. ಸುಲಭವಾದ; ಸಲೀಸಾದ; ಸರಾಗವಾದ; ಕಷ್ಟವಲ್ಲದ: easy prey ಸುಲಭವಾಗಿ ಬಲಿಯಾಗುವ ವ್ಯಕ್ತಿ.
  4. ಸಂಕೋಚವಿಲ್ಲದ; ನಿಸ್ಸಂಕೋಚವಾದ.
  5. ಸರಳವಾದ; ಅತಿ ಕಟ್ಟು ನಿಟ್ಟಾಗಿರದ: easy manners ಸರಳವಾದ ನಡವಳಿಕೆ.
  6. ಸುಲಭನಮ್ಯ; ಸುಲಭವಾಗಿ — ಒಪ್ಪಿಸಲಾಗುವ, ಒಲಿಸಲಾಗುವ: a man of easy virtue (ಲಂಚ ಮೊದಲಾದ ಪ್ರಲೋಭನಕ್ಕೆ) ಸುಲಭವಾಗಿ ಬಗ್ಗುವ ವ್ಯಕ್ತಿ.
  7. (ಸರಕುಗಳ ವಿಷಯದಲ್ಲಿ) ಅಗ್ಗದ; ಸುಲಭವಾಗಿ ದೊರೆಯುವ.
  8. (ಮಾರುಕಟ್ಟೆ, ಪೇಟೆಗಳ ವಿಷಯದಲ್ಲಿ) ಹೆಚ್ಚು ಬೇಡಿಕೆಯಿಲ್ಲದ; ಗಿರಾಕಿ ಕಡಮೆಯಾದ; ಅಗ್ಗವಾದ; ಸೋವಿಯಾದ; ಭರಾಟೆ ಕುಗ್ಗಿದ; ಮಂದಿಯಾದ: the market is easy ಪೇಟೆ ಮಂದಿಯಾಗಿದೆ; (ಹೆಚ್ಚು ಬೇಡಿಕೆ ಇಲ್ಲದೆ) ಪೇಟೆಯಲ್ಲಿ (ವ್ಯಾಪಾರದ) ಭರಾಟೆ ಕಡಿಮೆಯಾಗಿದೆ.
ಪದಗುಚ್ಛ
  1. easy of access
    1. ಸುಲಭಸಾಧ್ಯ; ಸುಗಮ.
    2. ಸುಲಭಗಮ್ಯ: the present president is easy of access ಈಗಿನ ಅಧ್ಯಕ್ಷರು ಸುಲಭವಾಗಿ ಸಿಗುತ್ತಾರೆ.
  2. free and easy ಸಲೀಸಾದ; ಸರಳವಾದ; ಅತಿ ಕಟ್ಟು ನಿಟ್ಟಿಲ್ಲದ.
ನುಡಿಗಟ್ಟು
  1. easy circumstances ಅನುಕೂಲ ಸ್ಥಿತಿ; ಸದ್ಧಿ; ಐಶ್ವರ್ಯ.
  2. easy on the eye (ಆಡುಮಾತು) ನೋಡಲು ಸುಂದರವಾದ, ಅಂದವಾದ.
  3. I’m easy (ಆಡುಮಾತು) (ನನಗೆ ಉಭಯ ಪಕ್ಷಗಳ ಪೈಕಿ) ಯಾವ ಕಡೆಗೂ ಒಲವಿಲ್ಲ.
  4. woman of easy virute ನಡತೆಗೆಟ್ಟ ಹೆಂಗಸು; ವ್ಯಭಿಚಾರಿಣಿ.