See also 2early
1early ಅರ್ಲಿ
ಗುಣವಾಚಕ
  1. ಮುಂಚಿನ; ಹೊತ್ತಿಗೆ ಮುಂಚಿನ; ಮೊದಲಿನ; ಬೇಗನೆಯ; ಮುಂಚಿತವಾದ: an early visit ಹೊತ್ತಿಗೆ ಮುಂಚಿನ ಭೇಟಿ. early risers ಬೆಳಿಗ್ಗೆ ಬೇಗ ಯಾ ಹೊತ್ತಿಗೆ ಮುಂಚೆ ಏಳುವವರು.
  2. ಮುಂಬೆಳೆಯುವ; ಕಾಲಕ್ಕೆ ಮುಂಚೆ ಬಿಡುವ: early peaches ಮುಂಬೆಳೆ ಪೀಚ್‍ ಹಣ್ಣುಗಳು; ಕಾಲಕ್ಕೆ ಮುಂಚೆ ಬಿಟ್ಟ ಪೀಚ್‍ ಹಣ್ಣುಗಳು.
  3. (ಕಾಲ, ಅವಧಿ, ಬೆಳವಣಿಗೆ, ಮೊದಲಾದವುಗಳ) ಹತ್ತಿರದ; ಸಮೀಪದ: fix an early date ಒಂದು ಹತ್ತಿರದ ದಿನವನ್ನು ಗೊತ್ತುಮಾಡು.
  4. ಮೊದಲ(ನೆಯ); ಆದಿ; ಆರಂಭದ; ಶುರುವಿನ: the early part of the century ಶತಮಾನದ ಆದಿಭಾಗ. the early spring ವಸಂತದ ಆದಿಭಾಗ. the early morning ಪ್ರಾತಃಕಾಲದ ಆರಂಭ; ಮುಂಜಾನೆ.
  5. ಪ್ರಾಚೀನ; ಪುರಾತನ; ಆದಿಕಾಲದ: early man ಆದಿಮಾನವ. early art form ಪ್ರಾಚೀನ ಕಲಾರೂಪ.
ಪದಗುಚ್ಛ
  1. at the earliest ಬಹಳ ಮುಂಚೆ: on Wednesday at the earliest ಬಹಳ ಮುಂಚೆ ಎಂದರೆ ಬುಧವಾರ (ಅಂದರೆ, ಅದಕ್ಕಿಂತ ಮುಂಚಿತವಾಗಿ ಅಲ್ಲ).
  2. one’s earliest convenience ಒಬ್ಬನಿಗೆ ಅನುಕೂಲವಾದಷ್ಟು ಯಾ ಸಾಧ್ಯವಾದಷ್ಟು ಬೇಗ; ಆದಷ್ಟು ಮುಂಚಿತವಾಗಿ.
ನುಡಿಗಟ್ಟು

keep early hours ಬೇಗ ಮಲಗಿ ಬೇಗ ಏಳು.

See also 1early
2early ಅರ್ಲಿ
ಕ್ರಿಯಾವಿಶೇಷಣ

ಮೊದಲೇ; ಬೇಗನೆ; ಶೀಘ್ರವಾಗಿ; ಮುಂಚೆ; ಮುಂಚಿತವಾಗಿ: awoke early in the morning ಬೆಳಿಗ್ಗೆ ಹೊತ್ತಿಗೆ ಮುಂಚೆ ಎದ್ದ. the train arrived early ರೈಲು ಮುಂಚಿತವಾಗಿ ಬಂತು.

ಪದಗುಚ್ಛ

earlier on (later on ಎನ್ನುವಂತೆ)

  1. ಇನ್ನೂ ಮುಂಚೆಯೇ; ಮೊದಲೇ; ಹಿಂದೆಯೇ.
  2. ಆರಂಭದಲ್ಲಿಯೇ; ಶುರುವಿನಲ್ಲಿಯೇ; ಪ್ರಾರಂಭದ ಹಂತದಲ್ಲಿಯೇ: he realised earlier on that it was impossible ಅದು ಆಸಾಧ್ಯವೆಂದು ಅವನು ಪ್ರಾರಂಭದಲ್ಲಿಯೇ ತಿಳಿದುಕೊಂಡ.