See also 2early
1early ಅರ್ಲಿ
ಗುಣವಾಚಕ
  1. ಮುಂಚಿನ; ಹೊತ್ತಿಗೆ ಮುಂಚಿನ; ಮೊದಲಿನ; ಬೇಗನೆಯ; ಮುಂಚಿತವಾದ: an early visit ಹೊತ್ತಿಗೆ ಮುಂಚಿನ ಭೇಟಿ. early risers ಬೆಳಿಗ್ಗೆ ಬೇಗ ಯಾ ಹೊತ್ತಿಗೆ ಮುಂಚೆ ಏಳುವವರು.
  2. ಮುಂಬೆಳೆಯುವ; ಕಾಲಕ್ಕೆ ಮುಂಚೆ ಬಿಡುವ: early peaches ಮುಂಬೆಳೆ ಪೀಚ್‍ ಹಣ್ಣುಗಳು; ಕಾಲಕ್ಕೆ ಮುಂಚೆ ಬಿಟ್ಟ ಪೀಚ್‍ ಹಣ್ಣುಗಳು.
  3. (ಕಾಲ, ಅವಧಿ, ಬೆಳವಣಿಗೆ, ಮೊದಲಾದವುಗಳ) ಹತ್ತಿರದ; ಸಮೀಪದ: fix an early date ಒಂದು ಹತ್ತಿರದ ದಿನವನ್ನು ಗೊತ್ತುಮಾಡು.
  4. ಮೊದಲ(ನೆಯ); ಆದಿ; ಆರಂಭದ; ಶುರುವಿನ: the early part of the century ಶತಮಾನದ ಆದಿಭಾಗ. the early spring ವಸಂತದ ಆದಿಭಾಗ. the early morning ಪ್ರಾತಃಕಾಲದ ಆರಂಭ; ಮುಂಜಾನೆ.
  5. ಪ್ರಾಚೀನ; ಪುರಾತನ; ಆದಿಕಾಲದ: early man ಆದಿಮಾನವ. early art form ಪ್ರಾಚೀನ ಕಲಾರೂಪ.
ಪದಗುಚ್ಛ
  1. at the earliest ಬಹಳ ಮುಂಚೆ: on Wednesday at the earliest ಬಹಳ ಮುಂಚೆ ಎಂದರೆ ಬುಧವಾರ (ಅಂದರೆ, ಅದಕ್ಕಿಂತ ಮುಂಚಿತವಾಗಿ ಅಲ್ಲ).
  2. one’s earliest convenience ಒಬ್ಬನಿಗೆ ಅನುಕೂಲವಾದಷ್ಟು ಯಾ ಸಾಧ್ಯವಾದಷ್ಟು ಬೇಗ; ಆದಷ್ಟು ಮುಂಚಿತವಾಗಿ.
ನುಡಿಗಟ್ಟು

keep early hours ಬೇಗ ಮಲಗಿ ಬೇಗ ಏಳು.