See also 2distress
1distress ಡಿಸ್‍ಟ್ರೆಸ್‍
ನಾಮವಾಚಕ
  1. ಅತಿ ನೋವು; ಕಟುವೇದನೆ; ಬೇಗುದಿ; ಕಡುಬೇಗೆ; ತೀವ್ರ – ಯಾತನೆ, ವೇದನೆ; ಕಡು ಕಷ್ಟ; ದಾರುಣ – ವ್ಯಥೆ, ಸಂತಾಪ; ತಾಳಲಾರದ – ಕಷ್ಟ, ಸಂಕಟ; ಪಡಲಾರದ – ಬಾಧೆ, ತೊಂದರೆ.
  2. (ಹಣದ ಹಾಗೂ ಇತರ ಅವಶ್ಯಕತೆಗಳು) ಕೊರತೆ; ಅಭಾವ.
  3. ಕಷ್ಟದಶೆ; ಆಪತ್ತು; ವಿಪತ್ತು; ಅಪಾಯಕರ ಪರಿಸ್ಥಿತಿ.
  4. ಅತಿ ದಣಿವು; ಅತಿ ಆಯಾಸ; ಕಡು ಶ್ರಮ; ತೀರ ಸುಸ್ತು; ಉಸಿರು ಉಡುಗಿಹೋಗಿರುವಿಕೆ; ಸೋತು ಹೋಗಿರುವುದು; ಬಲು ಬಳಲಿಕೆ; ತುಂಬಾ ಸುಸ್ತಾಗಿರುವುದು.
  5. (ನ್ಯಾಯಶಾಸ್ತ್ರ) = distraint.
  6. (ಹಡಗು, ವಿಮಾನ, ಮೊದಲಾದವುಗಳಿಗೆ ಒದಗಿದ) ಅಪಾಯ; ಹಾನಿ.
See also 1distress
2distress ಡಿಸ್‍ಟ್ರೆಸ್‍
ಸಕರ್ಮಕ ಕ್ರಿಯಾಪದ
  1. ಅತಿ ಕಷ್ಟಕ್ಕೀಡು ಮಾಡು; ಬಹಳ ಪೀಡಿಸು; ತುಂಬ ಕಾಡು; ಬಹಳ ಕಾಟ ಕೊಡು; ಗೋಳುಗುಟ್ಟಿಸು; ಉಪದ್ರವ ಕೊಡು.
  2. ಅತಿ ಆಯಾಸ ಉಂಟುಮಾಡು; ತುಂಬ ದಣಿಸು; ಅತಿ ಬಳಲಿಸು; ತೀರ ಸುಸ್ತು ಮಾಡು.
  3. ಕಾತರ ಹುಟ್ಟಿಸು; ಕಳವಳ ಉಂಟುಮಾಡು.
  4. ತೊಂದರೆ ಕೊಡು; ವ್ಯಥೆಯುಂಟು ಮಾಡು; ಯಾತನೆಗೀಡುಮಾಡು.