See also 2debit
1debit ಡೆಬಿಟ್‍
ನಾಮವಾಚಕ
  1. (ಜಮಾಖರ್ಚು ಪುಸ್ತಕದಲ್ಲಿ) ಖರ್ಚು ಹಾಕುವುದು; ಸಾಲ ತೋರುವುದು; ಬಾಕಿ ತೋರುವುದು; ದೇಣಿ ಗುರುತಿಸುವುದು; ಕೊಡಬೇಕಾದ ಹಣ ನಮೂದಿಸುವುದು.
  2. ಖರ್ಚುಖಾತೆ; ಸಾಲದ ಖಾತೆ; ಖರ್ಚು, ಸಾಲ, ಮೊದಲಾದವನ್ನು ತೋರಿಸುವ ಖಾತೆಯ ಎಡ ಭಾಗ; ‘ಜಮಾ’ ಎದುರು ಭಾಗ.
  3. (ಖಾತೆಯಲ್ಲಿ ತೋರಿಸಿದ) ದೇಣಿ; ಸಾಲ; ಖರ್ಚು.
  4. ಅನನುಕೂಲ ಯಾ ಪ್ರತಿಕೂಲವೆಂದೆನಿಸುವ ಯಾವುದೇ ವಿಷಯ: against these successes by the administration there are on the debit side a number of serious failures ಆಡಳಿತವು ತನ್ನ ಯತ್ನದಲ್ಲಿ ಜಯಗಳಿಸಿದ ಈ ನಿದರ್ಶನಗಳಿಗೆ ಪ್ರತಿಯಾಗಿ ಇನ್ನೊಂದು ಕಡೆ ಗುರುತರವಾದ ಹಲವಾರು ಪಜಯದ ನಿದರ್ಶನಗಳೂ ಇವೆ.
See also 1debit
2debit ಡೆಬಿಟ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನ ಲೆಕ್ಕಕ್ಕೆ) ಖರ್ಚು ಹಾಕು; ದೇಣಿ ಕಟ್ಟು: debit his account with fifty rupees ಅವನ ಲೆಕ್ಕಕ್ಕೆ ಐವತ್ತು ರೂಪಾಯಿ ಖರ್ಚುಹಾಕು.
  2. (ಮೊಬಲಗನ್ನು) ಖರ್ಚುಹಾಕು: debit five rupees against his account ಅವನ ಲೆಕ್ಕಕ್ಕೆ ಐದು ರೂಪಾಯಿ ಖರ್ಚುಹಾಕು. to whom shall I debit this sum? ಈ ಮೊಬಲಗನ್ನು ಯಾರ ಲೆಕ್ಕಕ್ಕೆ ಖರ್ಚು ಹಾಕಲಿ?
  3. ಖರ್ಚಿನ ಖಾತೆಯಲ್ಲಿ ನಮೂದಿಸು.